ಕಾಬೂಲ್: ಕಂದಹಾರ್ ವಿಮಾನ ನಿಲ್ದಾಣದ ಸಮೀಪ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ತೈಲ ಸಂಗ್ರಹಣಾ ಘಟಕದ ಮೇಲೆ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದೆ ಎಂದು ತಾಲಿಬಾನ್ ಸರ್ಕಾರ ಶುಕ್ರವಾರ ತಿಳಿಸಿದೆ.

ಚೀನಾದ ಸಂಧಾನದ ಪ್ರಯತ್ನಗಳ ನಡುವೆಯೂ ಉಭಯ ದೇಶಗಳ ನಡುವಿನ ಸಂಘರ್ಷ ತೀವ್ರ ಮಟ್ಟಕ್ಕೆ ತಲುಪಿದೆ.

‘ರಾಜಧಾನಿ ಕಾಬೂಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದ್ದು, ಕೆಲವು ಕಡೆ ನಾಗರಿಕರ ಮನೆಗಳನ್ನು ಗುರಿಯಾಗಿಸಲಾಗಿದೆ. ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು’ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಎಚ್ಚರಿಕೆ ನೀಡಿದರು.

ಈ ನಡುವೆ, ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾ ಪ್ರಾಂತ್ಯದ ನಾಲ್ಕು ಉಗ್ರಗಾಮಿ ಅಡಗುತಾಣಗಳ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿರುವುದಾಗಿ ಪಾಕಿಸ್ತಾನ ಭದ್ರತಾ ಮೂಲಗಳು ತಿಳಿಸಿವೆ. ಇದರಲ್ಲಿ ಕಂದಹಾರ್ ವಿಮಾನ ನಿಲ್ದಾಣದ ತೈಲ ಸಂಗ್ರಹಣಾ ಕೇಂದ್ರವೂ ಸೇರಿದೆ ಎಂದು ಅದು ಹೇಳಿದೆ.

ಈ ದಾಳಿಗೆ ಪ್ರತಿಯಾಗಿ ಅಫ್ಗಾನಿಸ್ತಾನ ರಕ್ಷಣಾ ಸಚಿವಾಲಯವು, ಪಾಕಿಸ್ತಾನದ ಕೊಹತ್ನಲ್ಲಿರುವ ಸೇನಾ ನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಿಂದ ಪಾಕ್ ಸೇನಾ ನೆಲೆಗೆ ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ. ಈ ಕುರಿತು ಪಾಕಿಸ್ತಾನದ ಸೇನೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ನಿಲ್ಲದ ಸಂಘರ್ಷ:

ಅಫ್ಗಾನಿಸ್ತಾನವು ತನ್ನ ನೆಲದಲ್ಲಿ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿ ಕಳೆದ ತಿಂಗಳು ಪಾಕಿಸ್ತಾನ, ಅಫ್ಗಾನಿಸ್ತಾನದ ಮೇಲೆ ದಾಳಿ ನಡೆಸಿತ್ತು.

ಪಾಕ್ ಆರೋಪವನ್ನು ನಿರಾಕರಿಸಿದ್ದ ತಾನಿಬಾನ್ ಸರ್ಕಾರ, ಉಗ್ರವಾದ ಪಾಕಿಸ್ತಾನದ ಆಂತರಿಕ ಸಮಸ್ಯೆ ಎಂದು ಹೇಳಿತ್ತು. ಅಲ್ಲದೇ ಪಾಕ್ ದಾಳಿಗೆ ಪ್ರತಿ ದಾಳಿಯನ್ನೂ ನಡೆಸಿತ್ತು.

ಈ ಸಂಘರ್ಷವು ಹಲವು ದಿನಗಳವರೆಗೆ ಮುಂದುವರಿದಿದ್ದು, ಚೀನಾ ಮಧ್ಯಸ್ಥಿಕೆಯ ನಂತರ ಕಳೆದ ಒಂದು ವಾರದಿಂದ ಯಾವುದೇ ದಾಳಿಗಳು ವರದಿಯಾಗಿರಲಿಲ್ಲ. ಆದರೆ, ಇಂದು ಕಂದಹಾರ್ ಮೇಲೆ ದಾಳಿ ಮಾಡುವ ಮೂಲಕ ಪಾಕಿಸ್ತಾನವು ತಾನಿಬಾನಿಗಳನ್ನು ಮತ್ತೊಮ್ಮೆ ಸಂಘರ್ಷಕ್ಕೆ ಆಹ್ವಾನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.