ಇಸ್ಲಾಮಾಬಾದ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಶಾಶ್ವತ ಇತ್ಯರ್ಥಕ್ಕಾಗಿ ಅಮೆರಿಕ ಮತ್ತು ಇರಾನ್ ನಡುವೆ ಅರ್ಥಪೂರ್ಣ ಹಾಗೂ ಸುಗಮ ಮಾತುಕತೆ ಆಯೋಜಿಸುವುದು ತಮಗೆ ಗೌರವದ ವಿಷಯ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

ಸಂಘರ್ಷವನ್ನು ಕೊನೆಗೊಳಿಸುವ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ ಎರಡು ದಿನಗಳ ನಂತರ ದೇಶದ ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ಈ ಹೇಳಿಕೆ ನೀಡಿದ್ದಾರೆ.

ಶಾಂತಿ ಸ್ಥಾಪನೆಗಾಗಿ ಈಜಿಪ್ಟ್ ಮತ್ತು ಟರ್ಕಿಯ ಜೊತೆಗೆ ಹಿಂಬಾಗಿಲಿನಿಂದ ಪಾಕಿಸ್ತಾನ ಪ್ರಯತ್ನ ನಡೆಸುತ್ತಿದೆ ಎಂದು ಮಾಧ್ಯಮ ವರದಿಗಳ ಹಿನ್ನಲೆಯಲ್ಲಿ ಶೆಹಬಾಜ್ ಅವರ ಘೋಷಣೆ ಹೊರಬಿದ್ದಿತ್ತು.

‘ಶಾಂತಿ ಪುನರ್ಸ್ಥಾಪಿಸಲು ಚೀನಾ ಮತ್ತು ಪಾಕಿಸ್ತಾನ ಪ್ರಸ್ತಾಪಿಸಿದ ಐದು ಅಂಶಗಳ ಉಪಕ್ರಮವು ಉಪ ಪ್ರಧಾನಿ ಇಶಾಕ್ ಡಾರ್ ಅವರ ಬೀಜಿಂಗ್ ಭೇಟಿಯ ಪ್ರಮುಖ ಫಲಿತಾಂಶವಾಗಿದೆ. ಇದಕ್ಕೆ ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅಂದ್ರಾಬಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.