ನ್ಯೂಯಾರ್ಕ್ (ಪಿಟಿಐ): ‘ಅಮೆರಿಕ– ಇರಾನ್ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್ನ ಹಿಂದೆ ಶ್ವೇತಭವನದ ನೇರ ಪಾತ್ರ ಇದೆ’ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ.

ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಏ.7ರಂದು ರಾತ್ರಿ ಶರೀಫ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಅವರ ಪೋಸ್ಟ್ನಲ್ಲಿ ‘ಪಾಕಿಸ್ತಾನಿ ಪ್ರಧಾನಿ ಎಕ್ಸ್ ಸಂದೇಶದ ಕರಡು’ ಎಂಬ ತಲೆಬರಹ ಹಾಗೆಯೇ ಉಳಿದುಕೊಂಡಿತ್ತು. ಅಮೆರಿಕ ಸಿದ್ಧಪಡಿಸಿಕೊಟ್ಟ ಸಂದೇಶವನ್ನು ಯಥಾವತ್ತಾಗಿ ಪಾಕ್ ಪ್ರಧಾನಿ ಎಕ್ಸ್ನಲ್ಲಿ ಪೇಸ್ಟ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ, ಪೋಸ್ಟ್ನಲ್ಲಿದ್ದ ತಲೆ ಬರಹವನ್ನು ಪಾಕ್ ಅಳಿಸಿ ಹಾಕಿತ್ತು.

‘ಶರೀಫ್ ಎಕ್ಸ್ನಲ್ಲಿ ಪೋಸ್ಟ್ ಮಾಡುವುದಕ್ಕಿಂತಲೂ ಮುನ್ನವೇ ಶ್ವೇತಭವನವು ಈ ಪ್ರಕಟಣೆಯನ್ನು ಪರಿಶೀಲಿಸಿ, ಸಹಿ ಹಾಕಿತ್ತು. ಇರಾನ್ ಜತೆಗೆ ಕದನ ವಿರಾಮ ಒಪ್ಪಂದಕ್ಕೆ ಬರಲು ಅಮೆರಿಕ ಈ ಪ್ರಸ್ತಾವವನ್ನು ‘ಕೊನೆಯ ಹಂತದ ಸಾರ್ವಜನಿಕ ಮನವಿ’ಯಾಗಿ ರೂಪಿಸಿತ್ತು. ಪಾಕ್ ಪ್ರಧಾನಿಯ ಪೋಸ್ಟ್ ಕೂಡ ‘ಟ್ರಂಪ್ ಮಾತಿನ ಧಾಟಿಯಲ್ಲೇ ಇತ್ತು’ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ಟ್ರಂಪ್ ಸಿದ್ಧಪಡಿಸಿಕೊಟ್ಟ ಹೇಳಿಕೆಯನ್ನು ಪಾಕ್ ಪ್ರಧಾನಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪವನ್ನು ಶ್ವೇತಭವನ ಅಲ್ಲಗಳೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-1652456334

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.