ಕರಾಚಿ: ಯುನೈಟೆಡ್ ಅರಬ್ ಎಮಿರೇಟ್ಸ್ಗೆ ನೀಡಬೇಕಿದ್ದ 2 ಬಿಲಿಯನ್ ಡಾಲರ್ ಸಾಲವನ್ನು ಹಿಂದಿರುಗಿಸಿರುವುದಾಗಿ ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ (ಎಸ್ಬಿಪಿ) ಶನಿವಾರ ತಿಳಿಸಿದೆ.

ಆರ್ಥಿಕ ನೆರವಿನ ಭಾಗವಾಗಿ ಸೌದಿ ಅರೇಬಿಯಾವು 3 ಬಿಲಿಯನ್ ಡಾಲರ್ (ಅಂದಾಜು 83 ಸಾವಿರ ಕೋಟಿ ಪಾಕಿಸ್ತಾನ ರೂಪಾಯಿ) ಅನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದಲ್ಲಿ (ಎಸ್ಬಿಪಿ) ಜಮೆ ಇರಿಸಿದ ಎರಡು ದಿನಗಳ ನಂತರ, ಎಸ್ಬಿಪಿ ಈ ಘೋಷಣೆ ಮಾಡಿದೆ.

‘ಪಾಕಿಸ್ತಾನ ಸರ್ಕಾರವು ಯುಎಇಗೆ ನೀಡಬೇಕಿದ್ದ 2 ಬಿಲಿಯನ್ ಡಾಲರ್ (ಅಂದಾಜು 55 ಸಾವಿರ ಕೋಟಿ ಪಾಕಿಸ್ತಾನ ರೂಪಾಯಿ) ಸಾಲವನ್ನು ಹಿಂದಿರುಗಿಸಿರುವುದನ್ನು ಕೇಂದ್ರ ಬ್ಯಾಂಕ್ ಖಚಿತಪಡಿಸಿದೆ’ ಎಂದು ಎಸ್ಬಿಪಿ ವಕ್ತಾರರು ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಯುಎಇ ನೆರವಾಗಿತ್ತು. ಆದರೆ, ಇದೀಗ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಾಲ ಮರುಪಾವತಿಸುವಂತೆ ಯುಎಇ ಒತ್ತಾಯಿಸಿತ್ತು ಎಂದು ಮಾಧ್ಯಮಗಳಲ್ಲಿ ಕಳೆದ ತಿಂಗಳು ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.