ಇಸ್ಲಾಮಾಬಾದ್: ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಮುಂದಿನ ಒಂಬತ್ತು ತಿಂಗಳಲ್ಲಿ ಮತ್ತೆ ₹24,571 ಕೋಟಿ (3 ಬಿಲಿಯನ್ ಡಾಲರ್) ಸಾಲ ಪಡೆಯಲಿದೆ. ಇದರೊಂದಿಗೆ ಐಎಂಎಫ್‌ನಿಂದ ಅತಿ ಹೆಚ್ಚು ಸಾಲ ಪಡೆದ ನಾಲ್ಕನೇ ದೇಶ ಎನಿಸಿಕೊಳ್ಳಲಿದೆ.
ಒಪ್ಪಂದಕ್ಕೆ ಐಎಂಎಫ್ ಮಂಡಳಿಯು ಇನ್ನಷ್ಟೇ ಅನುಮೋದನೆ ನೀಡಬೇಕಿದೆ. ಸದ್ಯ ಐಎಂಎಫ್‌ನಿಂದ ಅತಿ ಹೆಚ್ಚು ಸಾಲ ಪಡೆದ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ. ಮೊದಲ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿ ಅರ್ಜೆಂ ಟಿನಾ, ಈಜಿಪ್ಟ್, ಉಕ್ರೇನ್, ಈಕ್ವೆಡಾರ್ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.