ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ: ಪಕ್ಷೇತರ ಸಂಸದರಿಗೆ ಪಕ್ಷ ಸೇರ್ಪಡೆಯಾಗದಂತೆ ನಿರ್ಬಂಧ

ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿಯಲ್ಲಿ ಮಸೂದೆ ಅಂಗೀಕಾರ
Published 6 ಆಗಸ್ಟ್ 2024, 14:23 IST
Last Updated 6 ಆಗಸ್ಟ್ 2024, 14:23 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ನಿಗದಿತ ಅವಧಿಯ ನಂತರ ಪಕ್ಷೇತರ ಸಂಸದರು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗದಂತೆ ನಿರ್ಬಂಧಿಸುವ ಮಸೂದೆಯನ್ನು ಪಾಕಿಸ್ತಾನ ನ್ಯಾಷನಲ್‌ ಅಸೆಂಬ್ಲಿಯು ಮಂಗಳವಾರ ಅಂಗೀಕರಿಸಿದೆ. 

ಚುನಾವಣಾ ಕಾಯ್ದೆ ತಿದ್ದುಪಡಿ–2024 ಅನ್ನು ಆಡಳಿತರೂಢ ಪಾಕಿಸ್ತಾನ ಮುಸ್ಲಿಂ ಲೀಗ್‌– ನವಾಜ್‌ ಪಕ್ಷದ ಸಂಸದರಾದ ಬಿಲಾಲ್‌ ಕಯಾನಿ, ಜೆಫ್‌ ಜಫಾರ್‌ ಅವರು ಅಸೆಂಬ್ಲಿಯಲ್ಲಿ ಮಂಡಿಸಿದರು. ಪಾಕಿಸ್ತಾನ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಪಕ್ಷದ ಸಂಸದರ ತೀವ್ರ ವಿರೋಧದ ನಡುವೆಯೂ ಮಸೂದೆಯನ್ನು ಅಂಗೀಕರಿಸಲಾಯಿತು.

ಚುನಾವಣಾ ಕಾಯ್ದೆಯ 66 ಹಾಗೂ 104 ಸೆಕ್ಷನ್‌ಗೆ ತಿದ್ದುಪಡಿ ತರಲಾಗಿದ್ದು, ಇದರಿಂದ ಪಕ್ಷೇತರ ಸಂಸದರು ನಿಗದಿತ ಅವಧಿ ಮುಗಿದ ಬಳಿಕ ಯಾವುದೇ ಪಕ್ಷಗಳಿಗೆ ಸೇರ್ಪಡೆಯಾಗುವುದನ್ನು ನಿರ್ಬಂಧಿಸಲಾಗಿದೆ. 

‘81 ಮಂದಿ ಸಂಸದರು ಸುನ್ನಿ ಇತ್ತೆಹಾದ್‌ ಕಾನ್ಸಿಲ್‌ನ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈಗ ನಾವು ಪಾಕಿಸ್ತಾನ ತೆಹ್ರೀಕ್‌–ಇ–ಇನ್ಸಾಫ್‌ ಪಕ್ಷಕ್ಕೆ ಸೇರಿದವರು ಎಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಮಸೂದೆಗೆ ತಿದ್ದುಪಡಿ ತರಲಾಗಿದೆ’ ಎಂದು ಕಾನೂನು ಸಚಿವ ತರಾರ್‌ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT