ಜೆರುಸಲೇಂ: ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಭಾನುವಾರ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಹಮಾಸ್, ಪ್ಯಾಲೆಸ್ಟೀನ್‌ನ ಉಗ್ರಗಾಮಿ ಗುಂಪೊಂದು ಹೊತ್ತುಕೊಂಡಿವೆ.
ಇಸ್ರೇಲ್–ಹಮಾಸ್ ನಡುವೆ ಕದನ ವಿರಾಮಕ್ಕಾಗಿ ಸಂಧಾನಕಾರರು ಪ್ರಯತ್ನಿಸುತ್ತಿರುವ ಮಧ್ಯದಲ್ಲೇ ಈ ದಾಳಿ ನಡೆದಿದೆ.
‘ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿಗಳನ್ನು ನಡೆಸಲಾಗುವುದು’ ಎಂದು ಉಗ್ರಗಾಮಿ ಗುಂಪು ತಿಳಿಸಿದೆ.
ದಾಳಿಕೋರ ಯೋಜಿಸಿದ್ದ ಸಮಯಕ್ಕೂ ಮೊದಲೇ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟಕ್ಕೂ ಮುನ್ನ, ದಾಳಿಕೋರನು ಬೆನ್ನಿಗೆ ದೊಡ್ಡ ಬ್ಯಾಗ್ ಏರಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿರುವುದು ಸಿ.ಸಿ.ಟಿ.ವಿ. ದೃಶ್ಯಾವಳಿಯಲ್ಲಿ ಕಂಡುಬಂದಿದೆ.
‘ಇದೇ ರಸ್ತೆಯಲ್ಲಿದ್ದ ಯಹೂದಿಗಳ ಧಾರ್ಮಿಕ ಕೇಂದ್ರವನ್ನು ಗುರಿಯಾಗಿರಿಸಿಕೊಂಡು ಆತ್ಮಾಹುತಿ ದಾಳಿ ನಡೆಸಲು ಯೋಜನೆ ರೂಪಿಸಿದ್ದರು’ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಇಸ್ರೇಲ್‌ನ ಮಾಧ್ಯಮಗಳು ವರದಿ ಮಾಡಿವೆ.