ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪೀನ್ಸ್‌ನತ್ತ ಪ್ರಬಲ ಚಂಡಮಾರುತ ‘ದೊಕ್ಸುರಿ’: ಜನರ ಸ್ಥಳಾಂತರ

Published 25 ಜುಲೈ 2023, 14:29 IST
Last Updated 25 ಜುಲೈ 2023, 14:29 IST
ಅಕ್ಷರ ಗಾತ್ರ

ಮನಿಲಾ: ಪ್ರಬಲ ಚಂಡಮಾರುತ  ‘ದೊಕ್ಸುರಿ’ ಉತ್ತರ ಫಿಲಿಪೀನ್ಸ್‌ನತ್ತ ಧಾವಿಸುತ್ತಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿಯಿಂದ ಜನರನ್ನು ಸ್ಥಳಾಂತರಗೊಳಿಸಲು ಆದೇಶಿಸಲಾಗಿದೆ. 

ಗಂಟೆಗೆ 185 ಕಿ.ಮೀ ವೇಗ ಪಡೆದುಕೊಂಡಿರುವ ಚಂಡಮಾರುತ ಬುಧವಾರದ ಹೊತ್ತಿಗೆ ಬಬುಯಾನ್‌ ಮತ್ತು ಕಗ್ಯಾನ್‌ ದ್ವೀಪಗಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ‌ ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ಹೇಳಿದೆ.  

ನಂತರ ತೈವಾನ್‌ ಮೂಲಕ ಆಗ್ನೇಯ ಚೀನಾವನ್ನು ಚಂಡಮಾರುತ ಪ್ರವೇಶಿಸಲಿದೆ ಎಂದು ತಿಳಿಸಲಾಗಿದೆ. ಫಿಲಿಪ್ಪೀನ್ಸ್‌ನಲ್ಲಿ ಈ ಚಂಡಮಾರುತವನ್ನು ಈಗೆ ಎಂದು ಕರೆಯಲಾಗಿದೆ.

ಸ್ಥಳಾಂತರಕ್ಕೆ ಒಪ್ಪದವರನ್ನು ಬಲವಂತವಾಗಿಯಾದರೂ ಬೇರೆಡೆಗೆ ಸಾಗಿಸಲು ಸ್ಥಳೀಯಾಡಳಿತಗಳು ಪೊಲೀಸರನ್ನು ನಿಯೋಜಿಸಿವೆ.  

‘ಚಂಡಮಾರುತವನ್ನು ಎದುರಿಸಲು ಜನ ಸಜ್ಜಾಗಿರಬೇಕು‌’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ರೆನಟೊ ಸೊಲಿಡಮ್‌ ತಿಳಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT