ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ವಿಶ್ವಕಪ್‌ ಹಾಗೂ ದೀಪಾವಳಿಗೆ ಆಸ್ಟ್ರೇಲಿಯಾದ ಪ್ರಧಾನಿಗೆ ಆಹ್ವಾನ ನೀಡಿದ ಮೋದಿ

Published 24 ಮೇ 2023, 7:12 IST
Last Updated 24 ಮೇ 2023, 7:12 IST
ಅಕ್ಷರ ಗಾತ್ರ

ನವದೆಹಲಿ: ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ‍ಪ್ರಧಾನಿ ಆ್ಯಂಟೊನಿ ಅಲ್ಬೆನೀಸ್‌ ಅವರನ್ನು ಈ ವರ್ಷ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್‌ ವಿಶ್ವಕಪ್‌ ಹಾಗೂ ದೀಪಾವಳಿ ಆಚರಣೆಗೆ ಆಹ್ವಾನಿಸಿದ್ದಾರೆ.

ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಕ್ರಿಕೆಟ್‌ ವಿಶ್ವಕಪ್‌ ನಡೆಯಲಿದ್ದು, ಭಾರತ ಆತಿಥ್ಯ ವಹಿಸಿದೆ. ನವೆಂಬರ್‌ 12 ರಂದು ದೀಪಾವಳಿ ಹಬ್ಬ ಇದೆ.

ಸಿಡ್ನಿಯಲ್ಲಿ ನಡೆದ ಜಂಟಿ ಪ‌ತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಹಾಗೂ ಆಸ್ಟ್ರೇಲಿಯ ನಡುವಣ ಸಂಬಂಧ ಟಿ–20 ಮಾದರಿಗೆ ಪ್ರವೇಶಿಸಿದೆ ಎಂದು ಹೇಳಿದರು.

‘ನಾನು ಪ್ರಧಾನ ಮಂತ್ರಿ ಆ್ಯಂಟೊನಿ ಅಲ್ಬೆನಿಸ್‌ ಹಾಗೂ ಆಸ್ಟ್ರೇಲಿಯಾದ ಎಲ್ಲಾ ಕ್ರಿಕೆಟ್‌ ಪ್ರೇಮಿಗಳನ್ನು ಈ ವರ್ಷ ನಡೆಯುವ ಕ್ರಿಕೆಟ್‌ ವಿಶ್ವಕಪ್‌ಗೆ ಭಾರತಕ್ಕೆ ಆಹ್ವಾನಿಸುತ್ತಿದ್ದೇನೆ. ಆ ವೇಳೆಯಲ್ಲಿ ನೀವು ಭಾರತದಲ್ಲಿ ವೈಭವದ ದೀಪಾವಳಿ ಸಂಭ್ರಮಾಚರಣೆಯನ್ನೂ ನೀವು ನೋಡಬಹುದು‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT