ಒಸ್ಲೊ(ನಾರ್ವೆ): ಯುರೋಪ್ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಐಸ್ಲ್ಯಾಂಡ್, ಫಿನ್ಲೆಂಡ್ ಹಾಗೂ ಡೆನ್ಮಾರ್ಕ್ ದೇಶಗಳ ಪ್ರಧಾನಿಯವರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚಿಸಿದರು.

ಭಾರತ–ನಾರ್ಡಿಕ್ 3ನೇ ಶೃಂಗಸಭೆ ಸಂದರ್ಭದಲ್ಲಿ ಈ ಸಭೆಗಳನ್ನು ನಡೆಸಿದ ಮೋದಿ, ಶುದ್ಧ ಇಂಧನ, ವ್ಯಾಪಾರ, ಸುಸ್ಥಿರತೆ ಹಾಗೂ ಡಿಜಿಟಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಕುರಿತಂತೆ ಚರ್ಚೆ ನಡೆಸಿದರು.

‘ಐಸ್ಲ್ಯಾಂಡ್ ಪ್ರಧಾನಿ ಕ್ರಿಸ್ತ್ರುನ್ ಫ್ರೊಸ್ತದೊಟ್ಟಿರ್, ಫಿನ್ಲೆಂಡ್ನ ಪೆಟೇರಿ ಒರ್ಪೊ ಹಾಗೂ ಡೆನ್ಮಾರ್ಕ್ನ ಹಂಗಾಮಿ ಪ್ರಧಾನಿ ಮೆಟ್ಟೆ ಫ್ರೆಡರಿಕ್ಸನ್ ಅವರೊಂದಿಗೆ ನಡೆಸಿದ ಸಭೆಯಲ್ಲಿ, ಭಾರತ ಹಾಗೂ ನಾರ್ಡಿಕ್ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಕುರಿತು ವ್ಯಾಪಕ ಚರ್ಚೆ ನಡೆಸಲಾಯಿತು’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮೋದಿ ಪೋಸ್ಟ್ ಮಾಡಿದ್ದಾರೆ.

‘ಕಡಲ ಆರ್ಥಿಕತೆ(ಬ್ಲೂ ಎಕಾನಮಿ) ಕ್ಷೇತ್ರದಲ್ಲಿ ಐಸ್ಲ್ಯಾಂಡ್ ಅಗಾಧ ಸಾಮರ್ಥ್ಯ ಹೊಂದಿದೆ. ಐರೋಪ್ಯ ಒಕ್ಕೂಟದೊಂದಿಗೆ ಭಾರತದ ಮುಕ್ತ ವ್ಯಾಪಾರ ಒಪ್ಪಂದದಿಂದ ಐಸ್ಲ್ಯಾಂಡ್ನೊಂದಿಗಿನ ವ್ಯಾಪಾರ ಹಾಗೂ ಆ ರಾಷ್ಟ್ರದಲ್ಲಿನ ಹೂಡಿಕೆಗೆ ಮತ್ತಷ್ಟು ಉತ್ತೇಜನ ದೊರೆಯುವ ವಿಶ್ವಾಸ ಇದೆ’ ಎಂದು ಮೋದಿ ಹೇಳಿದ್ದಾರೆ.

‘ನಾರ್ಡಿಕ್ ದೇಶಗಳ ಪ್ರಧಾನಿಗಳೊಂದಿಗೆ ಮೋದಿಯವರು ನಡೆಸಿದ ಸಭೆಗಳಲ್ಲಿ ನವೀಕರಿಸಬಹುದಾದ ಇಂಧನ, ಆರ್ಕ್ಟಿಕ್ನಲ್ಲಿ ಸಹಕಾರ, ನಾವೀನ್ಯತೆ ಹಾಗೂ ಡಿಜಿಟಲ್ ತಂತ್ರಜ್ಞಾನದಲ್ಲಿ ಸಹಕಾರ ಸೇರಿ ಹಲವು ಕ್ಷೇತ್ರಗಳ ಕುರಿತು ಚರ್ಚೆ ನಡೆಯಿತು’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.