ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಪ್‌ ಫ್ರಾನ್ಸಿಸ್‌ಗೆ ಅನಾರೋಗ್ಯ: ಸಾರ್ವಜನಿಕ ಭೇಟಿ ರದ್ದು

Published : 23 ಸೆಪ್ಟೆಂಬರ್ 2024, 13:17 IST
Last Updated : 23 ಸೆಪ್ಟೆಂಬರ್ 2024, 13:17 IST
ಫಾಲೋ ಮಾಡಿ
Comments

ರೋಮ್: ಜ್ವರದ ಲಕ್ಷಣಗಳು ಕಂಡುಬಂದ ಕಾರಣ ಪೋಪ್‌ ಫ್ರಾನ್ಸಿಸ್ ಅವರು ಸೋಮವಾರ ಸಾರ್ವಜನಿಕರ ಭೇಟಿಯನ್ನು ರದ್ದುಗೊಳಿಸಿದರು.

‘ಬೆಲ್ಜಿಯಂ ಮತ್ತು ಲುಕ್ಸಂಬರ್ಗ್ ಪ್ರವಾಸಕ್ಕೆ ತೆರಳಲು ಕೆಲವೇ ದಿನಗಳು ಬಾಕಿ ಇರುವಾಗ ಪೋಪ್ ಅವರಲ್ಲಿ ಜ್ವರದ ಲಕ್ಷಣಗಳು ಕಂಡುಬಂದಿವೆ’ ಎಂದು ವ್ಯಾಟಿಕನ್‌ ಸಿಟಿ ತಿಳಿಸಿದೆ.

‘ಪೋಪ್‌ ಅವರು ಬೆಲ್ಜಿಯಂ ಮತ್ತು ಲಕ್ಸಂಬರ್ಗ್ ಪ್ರವಾಸವನ್ನು ರದ್ದುಗೊಳಿಸಿಲ್ಲ’ ಎಂದು ವಕ್ತಾರರು ಖಚಿತಪಡಿಸಿದ್ದಾರೆ.

ಗುರುವಾರ ಲಕ್ಸಂಬರ್ಗ್‌ಗೆ ಭೇಟಿ ನೀಡಲಿರುವ ಪೋಪ್, ಬಳಿಕ ಬೆಲ್ಜಿಯಂನಲ್ಲಿ ತಂಗಲಿದ್ದಾರೆ. ಭಾನುವಾರ ಬ್ರಸೆಲ್ಸ್‌ನಲ್ಲಿ ಅವರ ಪ್ರವಾಸ ಕೊನೆಗೊಳ್ಳಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT