ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಅಮೆರಿಕ ಭೇಟಿಗಾಗಿ ಶನಿವಾರ ಫಿಲಡೆಲ್ಫಿಯಾಗೆ ಬಂದಿಳಿದರು.
ವಿಮಾನ ನಿಲ್ದಾಣದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಸಮುದಾಯದ ಸದಸ್ಯರು ಪ್ರಧಾನಿ ಅವರಿಗೆ ಅದ್ದೂರಿ ಸ್ವಾಗತ ನೀಡಿದರು.
ಮೋದಿ ಅವರು ಫಿಲಡೆಲ್ಫಿಯಾದಿಂದ ‘ಕ್ವಾಡ್’ ಶೃಂಗಸಭೆ ನಡೆಯಲಿರುವ ವಿಲ್ಮಿಂಗ್ಟನ್‌ಗೆ ಪ್ರಯಾಣಿಸಲಿದ್ದಾರೆ.