ಮಾಸ್ಕೊ: ಇರಾನ್ನ ಪರಮಾಣು ತಾಣಗಳ ಮೇಲೆ ದಾಳಿ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತನಾಡುವ ಯಾವುದೇ ಯೋಜನೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಸದ್ಯಕ್ಕೆ ಇಲ್ಲ ಎಂದು ಕ್ರೆಮ್ಲಿನ್(ರಷ್ಯಾ ವಿದೇಶಾಂಗ ಸಚಿವಾಲಯ) ಹೇಳಿದೆ.

ಆ ರೀತಿಯ ಯಾವುದೇ ಯೋಜನೆ ಇಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಅಗತ್ಯಬಿದ್ದರೆ, ದೂರವಾಣಿ ಕರೆಯನ್ನು ತುರ್ತಾಗಿ ಏರ್ಪಡಿಸಲಾಗುವುದು ಎಂದಿದ್ದಾರೆ.

ಭಾನುವಾರ ಇರಾನ್ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದ ನಂತರ ಟ್ರಂಪ್ ಮತ್ತು ಪುಟಿನ್ ನಡುವೆ ದೂರವಾಣಿ ಕರೆಯ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಡಿಮಿಟ್ರಿ ಈ ಉತ್ತರ ನೀಡಿದ್ದಾರೆ.

ಇರಾನ್ನ ಪರಮಾಣು ಯೋಜನೆಯನ್ನು ನಾಶಮಾಡುವ ಗುರಿಯೊಂದಿಗೆ ಅಮೆರಿಕ ಇರಾನ್ನ ಫೋರ್ಡೊ, ಇಸ್ಫಹಾನ್ ಮತ್ತು ನಟಾಂಜ್ ಪರಮಾಣು ತಾಣಗಳ ಮೇಲೆ ದಾಳಿ ಮಾಡಿತ್ತು. ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದರೆ ಮತ್ತಷ್ಟು ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಮೇಲಿನ ಅಮೆರಿಕ ದಾಳಿ ಸಮರ್ಥನೀಯವಲ್ಲ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ, ಸಂಸದ ಲಿಯೊನಿಡ್ ಸ್ಲಟ್ಸ್ಕೈ ಹೇಳಿದ್ದಾರೆ. ಇರಾಕ್ನಂತೆಯೇ ಇರಾನ್ನಲ್ಲಿಯೂ ಆಡಳಿತ ಬದಲಾವಣೆಯ ದೃಷ್ಟಿಯಿಂದ ಟ್ರಂಪ್ ಅವರನ್ನು ಎಳೆದು ತರಲಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕದ ದಾಳಿಗಳಿಂದ ನಮ್ಮ ಪರಮಾಣು ತಾಣವನ್ನು ನಾಶಪಡಿಸಲು ಸಾಧ್ಯವಾಗಿಲ್ಲ ಎಂದು ಇರಾನ್ ಹೇಳುತ್ತಿದ್ದು, ಪರಮಾಣು ಯೋಜನೆಯನ್ನು ಮುಂದುವರಿಸುತ್ತದೆ ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ.

ಇರಾನ್ನ ಮೂರು ತಾಣಗಳ ಮೇಲೆ ದಾಳಿ ಮಾಡಿ ಅಮೆರಿಕ ಏನು ಸಾಧಿಸಿದೆ? ಪರಮಾಣು ಯೋಜನೆಯ ನಿರ್ಣಾಯಕ ಮೂಲಸೌಕರ್ಯವು ಸ್ವಲ್ಪವೂ ನಷ್ಟ ಆಗಿಲ್ಲದಂತೆ ತೋರುತ್ತಿದೆ ಎಂದು ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯ ಉಪ ಅಧ್ಯಕ್ಷರಾಗಿರುವ ಮೆಡ್ವೆಡೆವ್ ತಮ್ಮ ಟೆಲಿಗ್ರಾಮ್ ಚಾನೆಲ್ನಲ್ಲಿ ಹೇಳಿದ್ದಾರೆ.
.ಇರಾನ್ ಪರಮಾಣು ನಾಶಕ್ಕೆ ಅಮೆರಿಕದಿಂದ ಸಾಧ್ಯವಾಗಿಲ್ಲವೇ?: ಚೀನಾ ತಜ್ಞರು ಹೇಳೋದೇನು?.ಇರಾನ್ ಮೇಲೆ ಅಮೆರಿಕದ ದಾಳಿ ಜಾಗತಿಕ ಪ್ರಕ್ಷುಬ್ಧತೆ ಉಲ್ಬಣಕ್ಕೆ ದಾರಿ: ರಷ್ಯಾ ಸಂಸದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.