ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ಮೇಲೆ ಯುದ್ಧ ಸಾರಿರುವ ಪಶ್ಚಿಮ ರಾಷ್ಟ್ರಗಳು –ವ್ಲಾಡಿಮಿರ್ ಪುಟಿನ್

Published 9 ಮೇ 2023, 19:34 IST
Last Updated 9 ಮೇ 2023, 19:34 IST
ಅಕ್ಷರ ಗಾತ್ರ

ಮಾಸ್ಕೊ: ‘ಪಶ್ಚಿಮ ರಾಷ್ಟ್ರಗಳಿಂದ ರಷ್ಯಾದ ಮೇಲೆ ನಿಜವಾದ ಯುದ್ಧವನ್ನು ಸಾರಲಾಗಿದೆ‘ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಂಗಳವಾರ ಇಲ್ಲಿ ಆರೋಪಿಸಿದರು.

ಉಕ್ರೇನ್ ರಾಜಧಾನಿ ಕೀವ್ ಮತ್ತು ಇತರ ನಗರಗಳನ್ನು ಗುರಿಯಾಗಿಸಿ ರಷ್ಯಾದ ಸೇನೆಯು ಮತ್ತೆ ಕ್ಷಿಪಣಿಗಳ ದಾಳಿ ನಡೆಸಿದ ಹಿಂದೆಯೇ ರಷ್ಯಾದ ಅಧ್ಯಕ್ಷರ ಈ ಹೇಳಿಕೆ ಬಂದಿದೆ.

ರಷ್ಯಾ ಸೇನೆಯು ಉಕ್ರೇನ್‌ ಅನ್ನು ಗುರಿಯಾಗಿಸಿ ಕ್ಷಿಪಣಿಗಳ ದಾಳಿ ನಡೆಸಿದ್ದು, ಉಕ್ರೇನ್‌ನ ಸೇನೆಯು ಇದನ್ನು ಎದುರಿಸಿದ್ದು ರಷ್ಯಾದ 23–25 ಕ್ಷಿಪಣಿಗಳನ್ನು ನಾಶಪಡಿಸಿದೆ ಎಂದು ಉಕ್ರೇನ್‌ ಪ್ರತಿಕ್ರಿಯಿಸಿದೆ. 

ಪಶ್ಚಿಮ ರಾಷ್ಟ್ರಗಳ ಬೆದರಿಕೆಯಿಂದ ದೇಶವನ್ನು ರಕ್ಷಿಸಿಕೊಳ್ಳಲು ಉಕ್ರೇನ್‌ ಮೇಲಿನ ಅತಿಕ್ರಮಣ ಅನಿವಾರ್ಯ ಎಂದು ಪುಟಿನ್ ಈಗಾಗಲೇ ಉಕ್ರೇನ್‌ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಈ ಆರೋಪವನ್ನು ಉಕ್ರೇನ್‌ ಮತ್ತು ಅದಕ್ಕೆ ಬೆಂಬಲವಾಗಿ ನಿಂತಿರುವ ರಾಷ್ಟ್ರಗಳು ನಿರಾಕರಿಸಿವೆ.

ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿಯನ್ನು ಸೋಲಿಸಿದ ನೆನಪಿಗಾಗಿ ಆಯೋಜಿಸಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್‌ ಅವರು, ‘ದೇಶದ ನಾಗರಿಕತೆಯು ಮತ್ತೊಮ್ಮೆ ನಿರ್ಣಾಯಕ ತಿರುವಿನಲ್ಲಿದೆ. ರಷ್ಯಾ ವಿರುದ್ಧ ಪಶ್ಚಿಮ ರಾಷ್ಟ್ರಗಳು ನಿಜವಾದ ಯದ್ಧ ಸಾರಿವೆ‘ ಎಂದು ಎಚ್ಚರಿಸಿದರು.

ಮಾಸ್ಕೊದ ರೆಡ್‌ ಸ್ಕ್ವೈರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 8,000 ತುಕಡಿಗಳು ಭಾವಹಿಸಿದ್ದವು. 2008ರ ನಂತರ ಇದು ಅತ್ಯಂತ ಕಡಿಮೆ ಹಾಜರಾತಿಯಾಗಿದೆ. ಕೋವಿಡ್‌ ವೇಳೆ 2020ರಲ್ಲಿ ನಡೆದಿದ್ದ ಪಥಸಂಚಲನದಲ್ಲಿಯೂ 13 ಸಾವಿರ ಯೋಧರು ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT