ಕತಾರ್: ಕತಾರ್ನ ರಾಸ್ ಲಫಾನ್ ಇಂಡಸ್ಟ್ರಿಯಲ್ ಸಿಟಿ ಮೇಲೆ ನಡೆದ ಕ್ಷಿಪಣಿ ದಾಳಿಯಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಗಣನೀಯವಾಗಿ ವ್ಯತ್ಯಯ ಉಂಟಾಗಿದೆ.

ಈ ದಾಳಿಯಿಂದಾಗಿ ಕತಾರ್ನ ದ್ರವೀಕೃತ ನೈಸರ್ಗಿಕ ಅನಿಲ (ಎನ್ಎನ್ಜಿ) ರಫ್ತು ಸಾಮರ್ಥ್ಯ ಶೇ 17ರಷ್ಟು ಕುಸಿತವಾಗಿದೆ.

ಇದು ಕತಾರ್ನಿಂದ ಅನಿಲ ಆಮದು ಮಾಡಿಕೊಳ್ಳುವ ಭಾರತದಂತಹ ರಾಷ್ಟ್ರಗಳಿಗೆ ದೊಡ್ಡ ಹೊಡೆತ ಎಂದೇ ಅಂದಾಜಿಸಲಾಗಿದ್ದು, ಆತಂಕ ಎದುರಾಗಿದೆ.

ಇರಾನ್ ಕ್ಷಿಪಣಿ ದಾಳಿ...

ಮಾರ್ಚ್ 18 ಹಾಗೂ 19ರಂದು ಕತಾರ್ನ ಅನಿಲ ಉತ್ಪಾದನಾ ಘಟಕಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಇದರಿಂದಾಗಿ ಭಾರಿ ಪ್ರಮಾಣದಲ್ಲಿ ಹಾನಿಯುಂಟಾಗಿದ್ದು, ಅನಿಲ ಉತ್ಪಾದನೆಗೆ ತೊಡಕು ಎದುರಾಗಿದೆ.
.ಕತಾರ್ ಘಟಕಕ್ಕೆ ದಾಳಿಯಾದರೆ ಇರಾನ್ನ ಅನಿಲ ಘಟಕ ಸ್ಫೋಟಿಸುವುದಾಗಿ ಟ್ರಂಪ್ ಬೆದರಿಕೆ.ಆಳ–ಅಗಲ | ಇಂಧನ ಭದ್ರತೆ: ಅತಿ ಅವಲಂಬನೆ ಸೃಷ್ಟಿಸಿದ ಬಿಕ್ಕಟ್ಟು.
ಭಾರಿ ನಷ್ಟ ಅಂದಾಜು...

ಇದರಿಂದಾಗಿ ವಾರ್ಷಿಕ ಆದಾಯದಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟ ಉಂಟಾಗಲಿದೆ ಎಂದು ಕತಾರ್ ಎನರ್ಜಿ ಅಂದಾಜಿಸಿದೆ.

ದುರಸ್ತಿಗೆ ಬೇಕು ಐದು ವರ್ಷ...

ದುರಸ್ತಿ ಕಾಮಗಾರಿಗೆ ಕನಿಷ್ಠ ಐದು ವರ್ಷ ಬೇಕಾಗಬಹುದು. ಇದರಿಂದಾಗಿ ದೀರ್ಘಾವಧಿಯ ಎಲ್ಎನ್ಜಿ ಪೂರೈಕೆ ಹಾಗೂ ಒಪ್ಪಂದದಲ್ಲಿ ಬಿಕ್ಕಟ್ಟು ಉಂಟಾಗಬಹುದು ಎಂದು ಹೇಳಲಾಗಿದೆ.

ಭಾರತಕ್ಕೂ ಆತಂಕ...

ಈ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಆತಂಕ ಎದುರಾಗಿದೆ. ಏಕೆಂದರೆ ಇಂಧನ ಪೂರೈಕೆಗಾಗಿ ಕತಾರ್ ದೇಶವನ್ನು ಭಾರತ ಅತಿ ಹೆಚ್ಚು ಅವಲಂಬಿಸಿದೆ.

ಭಾರತದ ಎಲ್ಎನ್ಜಿ ಆಮದಿನ ಅರ್ಧದಷ್ಟು ಪಾಲನ್ನು ಕತಾರ್ ಹೊಂದಿದೆ ಎಂದು ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ (ಪಿಪಿಸಿಎ) ದತ್ತಾಂಶವು ತೋರಿಸುತ್ತದೆ.

2024ರಲ್ಲಿ ಭಾರತವು ಸುಮಾರು 27.8 ಮಿಲಿಯನ್ ಮೆಟ್ರಿಕ್ ಟನ್ ಎಲ್ಎನ್ಜಿ ಆಮದು ಮಾಡಿಕೊಂಡಿತ್ತು. ಈ ಪೈಕಿ ಕತಾರ್ನಿಂದ ಮಾತ್ರ 11.30 ಮಿಲಿಯನ್ ಮೆಟ್ರಿಕ್ ಟನ್ ಎಲ್ಎನ್ಜಿ ಆಮದು ಮಾಡಿಕೊಳ್ಳಲಾಗಿತ್ತು. ಇದು ಒಟ್ಟು ಎಲ್ಎನ್ಜಿ ಆಮದಿನ ಶೇ 47ರಷ್ಟಾಗಿದೆ.

ಭಾರತಕ್ಕೆ ಅನಿಲ ಪೂರೈಸುವ ದೇಶಗಳಲ್ಲಿ ಕತಾರ್ ಮುಂಚೂಣಿಯಲ್ಲಿದೆ ಎಂದು ಪೆಟ್ರೋಲಿಯಂ ಯೋಜನೆ ಹಾಗೂ ವಿಶ್ಲೇಷಣಾ ಕೋಶ (ಪಿಪಿಎಸಿ) ಮತ್ತು ವಾಣಿಜ್ಯ ಸಚಿವಾಲಯದ 2025-26ರ ಅಂಕಿಅಂಶಗಳು ದೃಢೀಕರಿಸಿವೆ.

ಬೆಲೆ ಏರಿಕೆ ಭೀತಿ...

ಎಲ್ಎನ್ಜಿ ಪೂರೈಕೆಯಲ್ಲಿನ ಈ ಕೊರತೆಯಿಂದಾಗಿ ಭಾರತದ ದೇಶೀಯ ಮಾರುಕಟ್ಟೆಯಲ್ಲೂ ಅನಿಲ ಲಭ್ಯತೆಯ ಅಭಾವ ಉಂಟಾಗಬಹುದು. ಇದರಿಂದಾಗಿ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ.

ಕತಾರ್ನಲ್ಲಿ ಉಂಟಾಗಿರುವ ಈ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಮಾತ್ರವಲ್ಲದೆ ಚೀನಾ, ದಕ್ಷಿಣ ಕೊರಿಯಾ, ಇಟಲಿ ಮತ್ತು ಬೆಲ್ಜಿಯಂ ದೇಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ಸಾರಿರುವ ಯುದ್ಧದಿಂದಾಗಿ ಮಧ್ಯಫ್ರಾಚ್ಯದಲ್ಲಿ ತೈಲ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಇದರಿಂದಾಗಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದೆ.

ಭಾರತದಲ್ಲಿ ಎಲ್ಪಿಜಿ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಎಲ್ಎನ್ಜಿ ಹಾಗೂ ಎಲ್ಪಿಜಿಗಾಗಿ ಪಶ್ಚಿಮ ಏಷ್ಯಾ ರಾಷ್ಟ್ರಗಳನ್ನೇ ಹೆಚ್ಚು ಅವಲಂಬಿಸಿವೆ. ಇದು ಭಾರತದ ಆರ್ಥಿಕತೆ ಮೇಲೂ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

(ವಿವಿಧ ಸುದ್ದಿ ಮೂಲಗಳಿಂದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.