ಬ್ಯಾಂಕಾಕ್ (ಎಪಿ): ಕರೆನ್ ಜನಾಂಗದವರೇ ಹೆಚ್ಚಿರುವ ಎರಡು ಗ್ರಾಮಗಳ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ತಾಯಿ ಮತ್ತು 2 ವರ್ಷದ ಮಗು ಸೇರಿ ಐವರು ಮೃತಪಟ್ಟಿದ್ದಾರೆ.
ದಾಳಿಯಲ್ಲಿ ಎರಡು ಚರ್ಚ್ಗಳು ನೆಲಸಮವಾಗಿವೆ ಎಂದು ಸಂತ್ರಸ್ತರಿಗೆ ಔಷಧೋಪಚಾರ ಸೇರಿದಂತೆ ವಿವಿಧ ರೀತಿಯ ಪರಿಹಾರವನ್ನು ಒದಗಿಸುವ ‘ಫ್ರೀ ಬರ್ಮಾ ರೇಂಜರ್ಸ್’ ಮತ್ತು ಕರೆನ್ ಮಹಿಳೆಯರ ಸಂಘಟನೆಗಳು ತಿಳಿಸಿವೆ.
ಹೆಚ್ಚಿನ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ ದಶಕಗಳಿಂದ ಕರೆನ್ ಜನಾಂಗವು ಹೋರಾಟ ನಡೆಸುತ್ತಿದೆ.