ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುದ್ಧ ಟೀಕಿಸಿದ ರಷ್ಯಾ ಪತ್ರಕರ್ತ: 8 ವರ್ಷ ಸಜೆ

Published 30 ಆಗಸ್ಟ್ 2024, 15:32 IST
Last Updated 30 ಆಗಸ್ಟ್ 2024, 15:32 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್‌ನಲ್ಲಿ ನಾಗರಿಕರ ಮೇಲೆ ರಷ್ಯಾ ನಡೆಸಿದ ದಾಳಿಯ ಕುರಿತು ತನ್ನ ಪತ್ರಿಕೆಯಲ್ಲಿ ವರದಿ ಮಾಡಿದ ರಷ್ಯಾದ ಪತ್ರಿಕೆಯೊಂದರ ಪ್ರಕಾಶಕರನ್ನು ದೋಷಿ ಎಂದು ಶುಕ್ರವಾರ ಘೋಷಿಸಿರುವ ಸೈಬೀರಿಯಾ ನ್ಯಾಯಾಲಯವು, ಅವರಿಗೆ ಎಂಟು ವರ್ಷಗಳ ಸಜೆ ವಿಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗೊರ್ನೊ–ಅಲ್ಟೈಸ್ಕ್‌ ನಗರದ ನ್ಯಾಯಾಲಯವು ಪತ್ರಕರ್ತ ಮತ್ತು ಪ್ರಕಾಶಕರಾದ ಸೆರ್ಗೆಯ್‌ ಮಿಖೈಲೋವ್‌ ಅವರನ್ನು ಶಿಕ್ಷೆಗೆ ಗುರಿಪಡಿಸಿದೆ. 

ಸರ್ಗೆಯ್‌ ಅವರು ಅಲ್ಟಾಯ್‌ನ ಸೈಬೀರಿಯಾ ಪ್ರದೇಶದ ಪ್ರಮುಖ ಪತ್ರಕರ್ತರಾಗಿದ್ದು, ಸ್ಥಳೀಯ ‘ಲಿಸ್ಟಾಕ್‌’ ಪತ್ರಿಕೆಯ ಪ್ರಕಾಶಕರೂ ಆಗಿದ್ದಾರೆ. ರಷ್ಯಾ ಸೈನ್ಯದ ಬಗ್ಗೆ ಸುಳ್ಳು ಮಾಹಿತಿ ಹರಡಿದ್ದರಿಂದ ಅವರನ್ನು ನ್ಯಾಯಾಲಯ ಅಪರಾಧಿ ಎಂದು ತೀರ್ಪು ನೀಡಿದೆ.

2022ರ ಫೆಬ್ರುವರಿಯಲ್ಲಿ ಉಕ್ರೇನ್‌ ಮೇಲೆ ಮಾಸ್ಕೊ ದಾಳಿ ಆರಂಭಿಸಿದ ಬಳಿಕ ರಷ್ಯಾದಲ್ಲಿ ಜಾರಿಯಾದ ಹೊಸ ಕಾನೂನಿನ ಪ್ರಕಾರ, ‘ರಷ್ಯಾದಲ್ಲಿ ಯುದ್ಧವನ್ನು ಟೀಕಿಸುವುದು ಅಪರಾಧವಾಗಿದೆ. ಹಲವು ಪತ್ರಕರ್ತರು ಸೇರಿದಂತೆ ನೂರಾರು ರಷ್ಯನ್ನರ ವಿರುದ್ಧ ಈ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ನಾಗರಿಕ ಹಕ್ಕು ಸಂಘಟನೆಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT