ಕೀವ್: ರಷ್ಯಾ ನಾಲ್ಕು ದಿನಗಳಲ್ಲಿ ಮೂರನೇ ಬಾರಿ ಉಕ್ರೇನ್ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ. ರಷ್ಯಾದ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.
ರಷ್ಯಾದ ಪಡೆಗಳು ಐದು ಕ್ಷಿಪಣಿಗಳು ಮತ್ತು 74 ಡ್ರೋನ್‌ಗಳನ್ನು ಹಾರಿಸಿದ್ದವು. ಅವುಗಳ ಪೈಕಿ ನಮ್ಮ ವಾಯು ರಕ್ಷಣೆಯು ಎರಡು ಕ್ಷಿಪಣಿಗಳು ಮತ್ತು 60 ಡ್ರೋನ್‌ಗಳನ್ನು ನಾಶಮಾಡಿವೆ. ಇತರ 14 ಡ್ರೋನ್‌ಗಳು ಗುರಿ ತಲುಪುವ ಮುನ್ನ ಪತನಗೊಂಡಿರಬಹುದು ಎಂದು ಉಕ್ರೇನ್ ವಾಯುಪಡೆ ಹೇಳಿದೆ.
ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಶವಾದ ಡ್ರೋನ್ ಅವಶೇಷಗಳು ಬಿದ್ದಿದ್ದು, ನಾಗರಿಕರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಮೂಲಸೌಕರ್ಯಕ್ಕೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಕೈವ್‌ನ ಅಧಿಕಾರಿಗಳು ತಿಳಿಸಿದ್ದಾರೆ.