ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ –ರಷ್ಯಾ: ಪರಸ್ಪರ ಡ್ರೋನ್ ದಾಳಿ, ಕಟ್ಟಡಗಳಿಗೆ ಹಾನಿ

Published 30 ಮೇ 2023, 14:13 IST
Last Updated 30 ಮೇ 2023, 14:13 IST
ಅಕ್ಷರ ಗಾತ್ರ

ಕೀವ್: ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ರಷ್ಟಾ ವಾಯುದಾಳಿ ಮುಂದುವರಿಸಿದ್ದು, ಪ್ರತಿಯಾಗಿ ಉಕ್ರೇನ್ ಕೂಡಾ ಸೋಮವಾರ ರಷ್ಯಾದ ರಾಜಧಾನಿಯ ಮೇಲೆ ಡ್ರೋನ್‌ ದಾಳಿ ನಡೆಸಿದೆ.

ಮಾಸ್ಕೊ ನಗರ ಗುರಿಯಾಗಿಸಿ ಉಕ್ರೇನ್‌ ಸುಮಾರು 8 ಡ್ರೋನ್‌ ದಾಳಿ ನಡೆಸಿದೆ. ದಾಳಿಯನ್ನು ‘ಕೀವ್ ಆಡಳಿತದ ಭಯೋತ್ಪಾದನಾ ಕೃತ್ಯ’ ಎಂದು ರಷ್ಯಾ ಬಣ್ಣಿಸಿದೆ. ದಾಳಿ ಕುರಿತಂತೆ ಉಕ್ರೇನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಐದು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ದಾಳಿಯಿಂದ ಹಲವು ಕಟ್ಟಡಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದೆ. ಹಲವರಿಗೆ ಗಾಯಗಳಾಗಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಷ್ಯಾದ ಸೇನೆಯು ತಿಳಿಸಿದೆ.

ತೀವ್ರ ಜಖಂಗೊಂಡಿದ್ದ ಎರಡು ಕಟ್ಟಡಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಮಾಸ್ಕೊ ಗುರಿಯಾಗಿದ ಪ್ರಯೋಗಿಸಿದ್ದ ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಸ್ಕೊ ವಲಯದ ಗವರ್ನರ್‌ ಆಂಡ್ರೆ ವೊರೊಬ್ಯೊ ತಿಳಿಸಿದ್ದಾರೆ.

ಕೀವ್‌ ಮೇಲೆ ಮುಂದುವರಿದ ದಾಳಿ: ಇತ್ತ ಕೀವ್‌ ಗುರಿಯಾಗಿ ರಷ್ಯಾದ ಡ್ರೋನ್‌ ದಾಳಿ ಮುಂದುವರಿದಿದ್ದು, ಕೀವ್‌ನಲ್ಲಿ ಒಬ್ಬರು ಮೃತಪಟ್ಟಿದ್ದು, ಬೀತಿಗೊಳಗಾಗಿರುವ ಕೀವ್‌ ನಾಗರಿಕರು ಸುರಕ್ಷಿತ ಅಡಗುತಾಣಗಳಲ್ಲಿ ರಕ್ಷಣೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT