ಕೀವ್ (ಎಪಿ): ಉಕ್ರೇನ್ ಮೇಲೆ ರಷ್ಯಾ ಮಂಗಳವಾರ ರಾತ್ರಿ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ 27 ಮಂದಿ ಮೃತಪಟ್ಟಿದ್ದು, 120 ಮಂದಿ ಗಾಯಗೊಂಡಿದ್ದಾರೆ.

ಎರಡನೇ ವಿಶ್ವಯುದ್ಧದ 81ನೇ ವಿಜಯೋತ್ಸವದ ಅಂಗವಾಗಿ ಶುಕ್ರವಾರ ಮತ್ತು ಶನಿವಾರದಂದು ಏಕಪಕ್ಷೀಯ ಕದನವಿರಾಮ ಜಾರಿಯಲ್ಲಿರಲಿದೆ ಎಂದು ರಷ್ಯಾ ಘೋಷಿಸಿತ್ತು. ಹೀಗಾಗಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸಹ ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿದ್ದರು. ಕದನ ವಿರಾಮದ ಉಲ್ಲಂಘಿಸಿದರೆ ಸೇನಾ ದಾಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

‘ರಷ್ಯಾದ ಸೇನಾ ಪಡೆಗಳು ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೆ 108 ಡ್ರೋನ್ಗಳು ಮತ್ತು ಮೂರು ಕ್ಷಿಪಣಿಗಳನ್ನು ಹಾರಿಸಿವೆ’ ಎಂದು ಉಕ್ರೇನ್ ವಿದೇಶಾಂಗ ಸಚಿವ ಆ್ಯಂಡ್ರಿ ಸಿಬಿಹಾ ಹೇಳಿದ್ದಾರೆ.

‘ಉಕ್ರೇನ್ ತನ್ನದೇ ಆದ ಕದನ ವಿರಾಮವನ್ನು ಪಾಲಿಸುತ್ತಿಲ್ಲ. ಮಂಗಳವಾರ ಸಂಜೆಯಿಂದ ಬುಧವಾರ ಬೆಳಗಿನ ಜಾವದ ನಡುವೆ ರಷ್ಯಾದ ವಿವಿಧ ಪ್ರದೇಶಗಳು, ಕ್ರಿಮಿಯಾ ಪರ್ಯಾಯ ದ್ವೀಪ ಮತ್ತು ಕಪ್ಪು ಸಮುದ್ರದ ಮೇಲೆ ಉಕ್ರೇನ್ 53 ಡ್ರೋನ್ಗಳನ್ನು ಹಾರಿಸಿದ್ದು, ಅವುಗಳನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದು ಉರುಳಿಸಲಾಗಿದೆ’ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1320506253

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.