ಕೀವ್/ಮಿಡಲ್ಬಗ್: ‘ಉಕ್ರೇನ್ನ ನಾಗರಿಕರನ್ನು ಗುರಿಯಾಗಿಸಿ ರಷ್ಯಾವು ರಾತ್ರಿ ಹಗಲು ಎನ್ನದೆ ಸುಮಾರು 700 ಡ್ರೋನ್ಗಳನ್ನು, ಹಲವು ಕ್ಷಿಪಣಿಗಳನ್ನು ಬಳಸಿ ಇಡೀ ದಿನ ತೀವ್ರ ದಾಳಿ ನಡೆಸಿದ್ದು, 16 ಮಂದಿ ಮೃತಪಟ್ಟಿದ್ದಾರೆ. 80ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ’ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದರು.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಎರಡು ದಿನಗಳ ಜರ್ಮನಿ, ನಾರ್ವೆ ಮತ್ತು ಇಟಲಿ ಪ್ರವಾಸದಲ್ಲಿ ಇರುವಾಗಲೇ ಈ ದಾಳಿ ನಡೆದಿದೆ. ರಷ್ಯಾದ ಕ್ಷಿಪಣಿಗಳಿಂದ ರಕ್ಷಣೆ ಪಡೆದುಕೊಳ್ಳಲು ಆಧುನಿಕ ವಾಯು ರಕ್ಷಣಾ ವ್ಯವಸ್ಥೆ ಪಡೆದುಕೊಳ್ಳುವ ಸಲುವಾಗಿ ಝೆಲೆನ್ಸ್ಕಿ ಅವರು ಈ ಪ್ರವಾಸ ಕೈಗೊಂಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣಕ್ಕಾಗಿ ಅಮೆರಿಕವು ರಷ್ಯಾದ ತೈಲ ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದೆ. ಈ ಕಾರಣದಿಂದ ರಷ್ಯಾವು ತಮ್ಮ ಮೇಲೆ ದಾಳಿ ಹೆಚ್ಚು ಮಾಡಿದೆ ಎಂದು ಉಕ್ರೇನ್ ಭಯ ವ್ಯಕ್ತಪಡಿಸಿದೆ. ನಾಲ್ಕು ವರ್ಷಗಳ ರಷ್ಯಾದ ದಾಳಿಗಳಲ್ಲಿ 15 ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ.

ಝೆಲೆನ್ಸ್ಕಿಗೆ ಪ್ರಶಸ್ತಿ: ‘ಕಳೆದ ನಾಲ್ಕು ವರ್ಷಗಳಿಂದ ರಷ್ಯಾ ನಿರಂತರವಾಗಿ ನಡೆಸುತ್ತಿರುವ ದಾಳಿಗಳನ್ನು ಉಕ್ರೇನ್ ಜನತೆ ಧೈರ್ಯಯಿಂದ ಎದುರಿಸುತ್ತಿದ್ದಾರೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ದೇಶದೊಂದಿಗೆ ನಿಂತುಕೊಂಡು, ಎದೆಗಾರಿಕೆ ತೋರಿಸುತ್ತಿದ್ದಾರೆ. ಈ ಕಾರಣದಿಂದ ಇವರಿಗೆ ಪ್ರತಿಷ್ಠಿತ ‘ಇಂಟರ್ನ್ಯಾಷನಲ್ ಫೋರ್ ಫ್ರೀಡಮ್ಸ್’ ಪ್ರಶಸ್ತಿ ನೀಡುತ್ತಿದ್ದೇವೆ’ ಎಂದು ರೂಸ್ವೆಲ್ಟ್ ಫೌಂಡೇಷನ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.