ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ತುಳಿತ: ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪ ಹೊರಿಸಲು ಶಿಫಾರಸು

Last Updated 13 ಜನವರಿ 2023, 12:43 IST
ಅಕ್ಷರ ಗಾತ್ರ

ಸೋಲ್‌: ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ಸಂಭವಿಸಿದ್ದ ಕಾಲ್ತುಳಿತ ಅವಘಡಕ್ಕೆ ಸಂಬಂಧಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಆರೋಪದಲ್ಲಿ 23 ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಮತ್ತು ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪ ಹೊರಿಸಬೇಕೆಂದು ಪೊಲೀಸರ ವಿಶೇಷ ತನಿಖಾ ತಂಡ ಶುಕ್ರವಾರ ಶಿಫಾರಸು ಮಾಡಿದೆ.

ನೈಟ್‌ಲೈಫ್‌ ಜಿಲ್ಲೆಯಲ್ಲಿ ವಾರಾಂತ್ಯಕ್ಕೆ 1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದರೂ ಕಾಲ್ತುಳಿತ ಸಂಭವಿಸಿದ್ದ ದಿನ ಸೋಲ್‌ ಪೊಲೀಸರು 137 ಅಧಿಕಾರಿಗಳನ್ನು ಮಾತ್ರ ಭದ್ರತೆಗಾಗಿ ನಿಯೋಜಿಸಿದ್ದರು ಎಂದೂ ತನಿಖಾ ತಂಡ ಹೇಳಿದೆ.

ಹ್ಯಾಲೋವಿನ್‌ ಉತ್ಸವ ಆಚರಣೆಯ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 160 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT