ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ನೇತೃತ್ವದ ಶ್ವೇತ ಭವನದ ಧಾರ್ಮಿಕ ಸ್ವಾತಂತ್ರ್ಯಆಯೋಗದಲ್ಲಿ ಸಲಹೆಗಾರ್ತಿಯಾಗಿದ್ದ ಏಕೈಕ ಮುಸ್ಲಿಂ ಮಹಿಳೆ ಸಮೀರಾ ಮುನ್ಷಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕದ ಆಡಳಿತದಲ್ಲಿ ಹಾಗೂ ವಿದೇಶಾಂಗ ನೀತಿಗಳಲ್ಲಿ ‘ಅನ್ಯಾಯ ಮತ್ತು ಕ್ರೌರ್ಯವೇ ತುಂಬಿದ್ದು ಇದರ ಪ್ರತಿಭಟನೆಯ ಸೂಚಕವಾಗಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸಮೀರಾ ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ರಾಜೀನಾಮೆ ನೀಡಲು ಕಾರಣಗಳನ್ನು ಅವರು ತಿಳಿಸಿದ್ದಾರೆ.

ಆಯೋಗದ ಸದಸ್ಯೆ ಕ್ಯಾರಿ ಪ್ರಿಜಿಯನ್ ಅವರನ್ನು ಹುದ್ದೆಯಿಂದ ತೆಗೆದು ಹಾಕಿರುವುದನ್ನು ಖಂಡಿಸಿದ್ದಾರೆ. ಪ್ಯಾಲೆಸ್ಟೇನ್ ಕುರಿತ ಅಭಿಪ್ರಾಯಗಳಿಂದಲೇ ಅವರನ್ನು ತೆಗೆದುಹಾಕಲಾಗಿದೆ ಎಂದು ಸಮೀರಾ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.