ಲಂಡನ್: ಬ್ರಿಟನ್ನ ಕ್ಯಾಂಟರ್ಬರಿಯಲ್ಲಿರುವ ‘ಚರ್ಚ್ ಆಫ್ ಇಂಗ್ಲೆಂಡ್’ನ ಮೊದಲ ಮಹಿಳಾ ಆರ್ಚ್ಬಿಷಪ್ ಆಗಿ ಸಾರಾ ಮುಲ್ಲಾಲ್ಲಿ (63) ಅವರು ಬುಧವಾರದಿಂದ ಸೇವೆ ಆರಂಭಿಸಿದರು.

ಚರ್ಚ್ ಆಫ್ ಇಂಗ್ಲೆಂಡ್ನ ಮುಖ್ಯಸ್ಥೆ ಹಾಗೂ ವಿಶ್ವದಾದ್ಯಂತದ ‘ಆಂಗ್ಲಿಕನ್ ಕಮ್ಯುನಿಯನ್’ನ ಆಧ್ಯಾತ್ಮಿಕ ನಾಯಕಿ ಆಗಿ ಇವರು ಕಾರ್ಯನಿರ್ವಹಿಸಲಿದ್ದಾರೆ. ಅಮೆರಿಕದಲ್ಲಿರುವ ಎಪಿಸ್ಕೋಪಲ್ ಚರ್ಚ್ ಸೇರಿದಂತೆ ಸ್ವತಂತ್ರ ಚರ್ಚ್ಗಳ ಸಂಘವಾಗಿರುವ ಕಮ್ಯುನಿಯನ್, ಒಟ್ಟು 10 ಕೋಟಿ ಸದಸ್ಯರನ್ನು ಹೊಂದಿದೆ.

ಈ ಹಿಂದೆ ಶುಷ್ರೂಷಕಿಯಾಗಿ, ಕ್ಯಾನ್ಸರ್ ರೋಗಿಗಳ ಆರೈಕೆ ಮಾಡಿದ್ದ ಸಾರಾ, 40ನೇ ವಯಸ್ಸಿಗೆ ಪಾದ್ರಿಯಾದರು. ಜನವರಿಯಲ್ಲಿ ಇವರನ್ನು ಆರ್ಚ್ಬಿಷಪ್ ಆಗಿ ಅಧಿಕೃತವಾಗಿ ಆಯ್ಕೆ ಮಾಡಲಾಗಿತ್ತು.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಅಧಿಕೃತವಾಗಿ ಸೇವೆ ಆರಂಭಿಸಿದರು. ರಾಜಕುಮಾರ ವಿಲಿಯಂ, ರಾಜಕುಮಾರಿ ಕ್ಯಾಥರೀನ್, ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಹಾಗೂ ಕಮ್ಯುನಿಯನ್ನ 42 ಸದಸ್ಯ ಚರ್ಚ್ಗಳ ಪ್ರತಿನಿಧಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.