ಟೆಲ್ ಅವಿವ್: ಪ್ಯಾಲೆಸ್ಟಿನ್‌ನ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಬುಧವಾರ ಪ್ಯಾಲೆಸ್ಟಿನ್‌ನ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರು ಮಂದಿಯಲ್ಲಿ ಕನಿಷ್ಠ ಮೂವರು ಭಯೋತ್ಪಾದಕರು ಎಂದು ತಿಳಿದುಬಂದಿದೆ.
ವೆಸ್ಟ್ ಬ್ಯಾಂಕ್‌ನ ಉತ್ತರ ಭಾಗದಲ್ಲಿರುವ ಜೆನಿನ್ ಎಂಬ ನಿರಾಶ್ರಿತರ ಶಿಬಿರದ ಮೇಲೆ ದಾಳಿ ಮಾಡಿದ ಇಸ್ರೇಲ್ ಸೇನೆ, ನಾಲ್ವರನ್ನು ಕೊಂದು ಹಾಕಿತ್ತು. ಈ ವೇಳೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮತ್ತೊಂದು ನಿರಾಶ್ರಿತರ ಶಿಬಿರದಲ್ಲಿ ಮತ್ತೊಬ್ಬ ಪ್ಯಾಲೆಸ್ಟಿನ್ ಪ್ರಜೆ ಬಲಿಯಾಗಿದ್ದ. ಒಟ್ಟಾರೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಗುಂಡಿನ ದಾಳಿಯಲ್ಲಿ ತನ್ನ ಆರು ಪ್ರಜೆಗಳು ಬಲಿಯಾಗಿದ್ದಾರೆ ಎಂದು ಪ್ಯಾಲೆಸ್ಟಿನ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ತಮ್ಮ ಸೇನೆಯ ಮೇಲೆ ಸ್ಫೋಟಕಗಳನ್ನು ಎಸೆಯುತ್ತಿದ್ದ ಪ್ಯಾಲೆಸ್ಟಿನ್ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಮಾಡಲಾಗಿತ್ತು. ಜತೆಗೆ ಮಂಗಳವಾರ ರಾತ್ರಿಯೇ ಅಕ್ವಾಬಾಟ್ ಜಬರ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಸೇನೆ ಬುಧವಾರ ತಿಳಿಸಿದೆ.
ಕಳೆದ ಒಂದೂವರೆ ವರ್ಷದಿಂದ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಉಭಯ ದೇಶಗಳ ನಡುವಣ ಕಾಳಗವು ಭಾರಿ ಹಿಂಸಾಚಾರಕ್ಕೆ ತಿರುಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.