ಗ್ರನಾಡಿಲ್ಲಾ ಡಿ ಅಬೋನಾ (ಸ್ಪೇನ್)/ ಪ್ಯಾರಿಸ್, (ಫ್ರಾನ್ಸ್): ಹಂಟಾವೈರಸ್ ಪೀಡಿತರಿದ್ದ ಐಷಾರಾಮಿ ವಿಹಾರ ನೌಕೆಯಿಂದ ಅಂತಿಮವಾಗಿ 22 ಜನರು ಸೋಮವಾರ ಕೆಳಗಿಳಿದಿದ್ದಾರೆ.

ಎರಡು ಪ್ರತ್ಯೇಕ ವಿಶೇಷ ವಿಮಾನಗಳಲ್ಲಿ ಸ್ಥಳಾಂತಗೊಳ್ಳಬೇಕಿದ್ದ ಇವರೆಲ್ಲರೂ ನೆದರ್ಲೆಂಡ್ಗೆ ಒಂದೇ ವಿಮಾನದಲ್ಲಿ ತೆರಳಲಿದ್ದಾರೆ ಎಂದು ಸ್ಪೇನ್ನ ಆರೋಗ್ಯ ಸಚಿವರಾದ ಮೋನಿಕಾ ಗಾರ್ಸಿಯಾ ಅವರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಪ್ರಜೆಗಳನ್ನು ಸಹ ನೆದರ್ಲೆಂಡ್ಗೆ ಇದೇ ವಿಮಾನದಲ್ಲಿ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಎಂಟು ಪ್ರಕರಣ ದೃಢ

ಐಷಾರಾಮಿ ವಿಹಾರ ನೌಕೆ ‘ಎಂವಿ ಹೊಂಡಿಯಸ್’ನಲ್ಲಿನ ಹಂಟಾವೈರಸ್ ಪೀಡಿತರು ಯಾವ ದೇಶಗಳಿಗೆ ಸೇರಿದವರು ಎಂಬುದನ್ನು ದೃಢಪಡಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಎಂಟು ಪ್ರಕರಣಗಳನ್ನು ದೃಢಪಡಿಸಲಾಗಿದ್ದು, ಎರಡು ಪ್ರಕರಣಗಳನ್ನು ‘ಶಂಕಿಸಲಾಗಿದೆ’ ಎಂದು ಪಟ್ಟಿ ಮಾಡಿದೆ.

ಆರು ದೇಶಗಳ ನಾಗರಿಕರು ವೈರಸ್ ಸೋಂಕಿನ ಪರಿಣಾಮ ಎದುರಿಸಿದ್ದಾರೆ. ಡಚ್ನ ದಂಪತಿ ಹಾಗೂ ಜರ್ಮನಿಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದಿದೆ.

ಬ್ರಿಟನ್ನ ಮೂವರು, ಡಚ್ ಹಾಗೂ ಸ್ವಿಟ್ಜರ್ಲೆಂಡ್ನ ತಲಾ ಒಬ್ಬರು, ಫ್ರಾನ್ಸ್ನ ಮಹಿಳೆ ಸೋಂಕು ಪೀಡಿತರಾಗಿದ್ದಾರೆ. ಅಮೆರಿಕದ 17 ಪ್ರಯಾಣಿಕರಲ್ಲಿ ಒಬ್ಬರಲ್ಲಿ ಹಂಟಾವೈರಸ್ ದೃಢಪಟ್ಟಿದ್ದರೆ, ಮತ್ತೊಬ್ಬರಲ್ಲಿ ಸೌಮ್ಯ ಲಕ್ಷಣಗಳು ಕಂಡುಬಂದಿವೆ ಎಂದು ತಿಳಿಸಿದೆ.

ಅರ್ಜೆಂಟೀನಾದಿಂದ ಏ.1ರಂದು ಪ್ರವಾಸ ಆರಂಭಿಸಿದ್ದ ವಿಹಾರ ನೌಕೆಯಲ್ಲಿ 28 ದೇಶಗಳ 150 ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.