ಕೊಲಂಬೊ: ಶ್ರೀಲಂಕಾದಲ್ಲಿ ಇರಾನ್ ಹಡಗಿನ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟ 84 ನಾವಿಕರ ಮೃತದೇಹವನ್ನು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸುವಂತೆ ಶ್ರೀಲಂಕಾದ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಗಾಲೆ ಮುಖ್ಯ ಮ್ಯಾಜಿಸ್ಟ್ರೇಟ್ ಸಮೀರಾ ದೊಡಂಗೊಡ ಅವರು, ಇರಾನ್ ರಾಯಭಾರ ಕಚೇರಿಗೆ ಶವಗಳನ್ನು ಹಸ್ತಾಂತರಿಸಬೇಕು ಎಂದು ಆಸ್ಪತ್ರೆಯ ನಿರ್ದೇಶಕರಿಗೆ ಆದೇಶಿಸಿದ್ದಾರೆ.

ಗಾಲೆ ಬಂದರು ಪೊಲೀಸರ ಮನವಿ ಮೇರೆಗೆ ಈ ಆದೇಶವನ್ನು ಹೊರಡಿಸಲಾಗಿದೆ. ಪ್ರಸ್ತುತ, ಮೃತದೇಹಗಳನ್ನು ಗಾಲೆ ರಾಷ್ಟ್ರೀಯ ಆಸ್ಪತ್ರೆಯ ಎರಡು ಶವ ಸಂರಕ್ಷಣಾ ಶೈತ್ಯಾಗಾರಗಳಲ್ಲಿ ಇಡಲಾಗಿದೆ.

ಗಾಲೆಯಲ್ಲಿ ಅಮೆರಿಕದ ಜಲಾಂತರ್ಗಾಮಿ ದಾಳಿಯಿಂದ ಇರಾನಿನ ಯುದ್ಧನೌಕೆ ‘ಐರೀಸ್ ಡೆನಾ’ ಮುಳುಗಿತ್ತು. ಅದರಲ್ಲಿದ್ದ ಇರಾನಿನ 84 ನಾವಿಕರ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀಲಂಕಾ ಕಳೆದ ಬುಧವಾರ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.