ಕೊಲಂಬೊ: ಪಶ್ಚಿಮ ಏಷ್ಯಾದಲ್ಲಿ ಇರಾನ್ ಜತೆ ಇಸ್ರೇಲ್ ಹಾಗೂ ಅಮೆರಿಕದ ಸಂಘರ್ಷವು ಮುಂದುವರಿದಿರುವ ಕಾರಣ ತೈಲ ಕೊರತೆಯಾಗಬಹುದು ಎನ್ನುವ ಮುಂಜಾಗ್ರತಾ ಕ್ರಮವಾಗಿ ವಾರಕ್ಕೆ 4 ದಿನ ಕೆಲಸಕ್ಕೆ ಶ್ರೀಲಂಕಾವು ಮುಂದಾಗಿದೆ.

ಮಾ.18ರಿಂದ ಈ ನಿರ್ಧಾರವು ಜಾರಿಗೆ ಬರಲಿದೆ. ಇಂಧನ ಸಮಸ್ಯೆ ಬಗೆಹರಿಯುವವರೆಗೆ ಪ್ರತಿ ಬುಧವಾರವನ್ನು ಸಾರ್ವಜನಿಕ ರಜಾ ದಿನ ಎಂದು ಶ್ರೀಲಂಕಾ ಸರ್ಕಾರವು ಘೋಷಿಸಲಾಗಿದೆ. ಇದುವರೆಗೂ ದ್ವೀಪ ರಾಷ್ಟ್ರದಲ್ಲಿ ವಾರಕ್ಕೆ ಐದು ದಿನ ಕೆಲಸ ಮಾಡಬೇಕಿತ್ತು.

ಶ್ರೀಲಂಕಾ ಸರ್ಕಾರದ ಹೊಸ ರಜಾ ನಿಯಮವು ಆರೋಗ್ಯ, ಬಂದರು, ನೀರು ಸರಬರಾಜು ಹಾಗೂ ತೆರಿಗೆ ಇಲಾಖೆಗೆ ಅನ್ವಯಿಸುವುದಿಲ್ಲ. ಶಾಲಾ –ಕಾಲೇಜು, ವಿಶ್ವವಿದ್ಯಾಲಯ ಮತ್ತು ನ್ಯಾಯಾಂಗ ಮಾತ್ರ ನಾಲ್ಕು ದಿನ ಕಾರ್ಯನಿರ್ವಹಿಸಬೇಕು ಎಂದು ಅಗತ್ಯ ಸೇವೆಗಳ ಕಮಿಷನರ್ ಜನರಲ್ ಆಗಿರುವ ಪ್ರಬಾತ್ ಚಂದ್ರಕೀರ್ತಿ ಅವರು ತಿಳಿಸಿದ್ದಾರೆ.

ಸರ್ಕಾರಿ ಇಲಾಖೆಗಳಂತೆ ಖಾಸಗಿ ವಲಯವು ಕೂಡ ಇದೇ ರೀತಿಯ ಕ್ರಮಕ್ಕೆ ಮುಂದಾಗಬೇಕು ಎಂದು ಪ್ರಬಾತ್ ಚಂದ್ರಕೀರ್ತಿ ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದ ತೈಲ ಕೊರತೆ ಉಂಟಾಗಿರುವ ಕಾರಣ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ಡಿಸಾನಾಯಕೆ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ತೈಲ ಕೊರತೆ ಉಂಟಾಗಿದ್ದು, ರಷ್ಯಾ ಮತ್ತು ಭಾರತದ ಜತೆ ನಿರಂತರ ತೈಲ ಸರಬರಾಜಿನ ಕುರಿತು ಮಾತುಕತೆಯಾಗುತ್ತಿದೆ.

ಅಮೆರಿಕ ಹಾಗೂ ಇಸ್ರೇಲ್ ನಡುವಿನ ಯುದ್ಧದ ಕಾರಣದಿಂದಾಗಿ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಿರುವುದರಿಂದ ಜಗತ್ತಿನ ವಿವಿಧ ದೇಶಗಳಲ್ಲಿ ತೈಲ ಕೊರತೆ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.