ಲಂಡನ್: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದಿಂದಾಗಿ ಜಾಗತಿಕವಾಗಿ ತಲೆದೋರಿರುವ ಇಂಧನ ಬಿಕ್ಕಟ್ಟು ತೀವ್ರಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜುಲೈ-ಆಗಸ್ಟ್ನಲ್ಲಿ ತೈಲ ಮಾರುಕಟ್ಟೆಯು 'ರೆಡ್ ಝೋನ್' (ಅಪಾಯ ವಲಯ) ತಲುಪಬಹುದು ಎಂದ ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯು (ಐಇಎ) ಎಚ್ಚರಿಸಿದೆ.

ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವೆ ನಡೆದ ಯುದ್ಧದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡಚಣೆ ಉಂಟಾಗಿದೆ. ಇದರಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆ ಸರಪಳಿಗೆ ತೊಂದರೆ ಎದುರಾಗಿದೆ. ಯುದ್ಧ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದ್ದರಿಂದ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿರುವ ಭೀತಿ ಇದೆ.

ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಮುಖ್ಯಸ್ಥ ಫಾತ್ಹೀ ಬಿರೋಲ್ ಪ್ರಕಾರ ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬರದಿದ್ದರೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಇಂಧನ ಬಿಕ್ಕಟ್ಟು ರೆಡ್ ಝೋನ್ಗೆ ತಲುಪಬಹುದು ಎಂದು ಎಚ್ಚರಿಸಿದ್ದಾರೆ.

ಬೇಸಿಗೆಯಲ್ಲಿ ಇಂಧನ ಬೇಡಿಕೆ ಹೆಚ್ಚಿರುವುದು ಹಾಗೂ ಕೊಲ್ಲಿ ರಾಷ್ಟ್ರಗಳಿಂದ ತೈಲ ರಫ್ತುಗಳ ಕೊರತೆ ಹಾಗೂ ಕಡಿಮೆಯಾಗುತ್ತಿರುವ ತೈಲ ದಾಸ್ತಾನುಗಳಿಂದಾಗಿ ತೀವ್ರ ಬಿಕ್ಕಟ್ಟು ತಲೆದೋರುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಇಂಧನ ಬಿಕ್ಕಟನ್ನು ಬಗೆಹರಿಸುವ ಏಕೈಕ ಪರಿಹಾರ ಮಾರ್ಗವೆಂದರೆ ಅದುವೇ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾರಿಗೆ ಮುಕ್ತಗೊಳಿಸುವುದು ಎಂದು ಅವರು ತಿಳಿಸಿದ್ದಾರೆ.
.ಭಾರತೀಯ ನೌಕಾಪಡೆ ಬೆಂಬಲದೊಂದಿಗೆ ಹೊರ್ಮುಜ್ ಜಲಸಂಧಿ ದಾಟಲಿರುವ LPG ಹೊತ್ತ ಹಡಗು.ಹೊರ್ಮುಜ್ ಮುಕ್ತ, ಯುದ್ಧ ಅಂತ್ಯಕ್ಕೆ ಇರಾನ್ನ 3 ಹಂತದ ಪ್ರಸ್ತಾವನೆಯಲ್ಲಿ ಏನಿದೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.