ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನಾಮ: 6.6 ತೀವ್ರತೆಯ ಭೂಕಂಪ

Published 25 ಮೇ 2023, 16:07 IST
Last Updated 25 ಮೇ 2023, 16:07 IST
ಅಕ್ಷರ ಗಾತ್ರ

ಪನಾಮ ಸಿಟಿ: ಪನಾಮ– ಕೊಲಂಬಿಯ ಗಡಿ ಬಳಿ ಕೆರಿಬಿಯನ್‌ ಸಮುದ್ರದಲ್ಲಿ ಬುಧವಾರ ರಾತ್ರಿ 6.6 ಕಂಪನಾಂಕ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂವಿಜ್ಞಾನ ಕೇಂದ್ರ ತಿಳಿಸಿದೆ.

ಪನಾಮದ ಪರ್ಟೊ ಒಬಾಲ್ಡಿಯಾದ ಈಶಾನ್ಯ ದಿಕ್ಕಿನಲ್ಲಿ 41 ಕಿ.ಮೀ ದೂರದಲ್ಲಿ ಸುಮಾರು 10 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. 

ಪನಾಮ ಪ್ರಾಂತ್ಯದ ಡರೈನ್, ಪನಾಮ, ಗುನಾ ಯಾಲ ಮತ್ತು ಪಶ್ಚಿಮ ಪನಾಮದಲ್ಲಿ ಭೂಕಂಪದ ಅನುಭವವಾಗಿದೆ. ಆಸ್ತಿಪಾಸ್ತಿ ಹಾನಿ ಅಥವಾ ಸಾವು-ನೋವಿನ ಕುರಿತು ವರದಿಯಾಗಿಲ್ಲ ಎಂದು ಪನಾಮದ ನಾಗರಿಕ ರಕ್ಷಣಾ ಆಯೋಗ ತಿಳಿಸಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT