ಲಂಡನ್: ತೈವಾನ್ ಮೂಲದ ಲೇಖಕಿ ಯಾಂಗ್ ಶುವಾಂಗ್-ಜಿ ಮತ್ತು ಅನುವಾದಕ ಲಿನ್ ಕಿಂಗ್ ಅವರು 2026ನೇ ಸಾಲಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

1930ರ ದಶಕದಲ್ಲಿ ಜಪಾನ್ ಆಕ್ರಮಿತ ತೈವಾನ್ನಲ್ಲಿ ನಡೆದ ಐತಿಹಾಸಿಕ ಪ್ರೇಮಕಥೆಯನ್ನು ಆಧರಿಸಿರುವ ‘ತೈವಾನ್ ಟ್ರಾವೆಲಾಗ್’ ಕಾದಂಬರಿಗೆ ಪ್ರಶಸ್ತಿ ಬಂದಿದೆ. 2020ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕವು, ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಮ್ಯಾಂಡರಿನ್ ಚೈನೀಸ್ ಭಾಷೆಯ ಕಾದಂಬರಿ ಇದಾಗಿದೆ.

ತೀರ್ಪುಗಾರರ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಬ್ರಿಟಿಷ್ ಕಾದಂಬರಿಕಾರ ನತಾಶಾ ಬ್ರೌನ್, ‘ ಈ ಕೃತಿಯು ಆಕರ್ಷಕ ಮತ್ತು ವಿಭಿನ್ನ ಕಥಾವಸ್ತುವಿನಿಂದ ಕೂಡಿದೆ. ಇದು ಭಾಷೆಯೊಂದಿಗೆ ಆಟವಾಡುವ ಮೂಲಕ ಓದುಗರಿಗೆ ಪ್ರತಿ ಪುಟದಲ್ಲೂ ಆಚ್ಚರಿಯನ್ನು ಮೂಡಿಸುತ್ತದೆ’ ಎಂದಿದ್ದಾರೆ.

ಜಪಾನ್ನ ವಸಾಹತುಶಾಹಿಯಾಗಿ ತೈವಾನ್ ಇದ್ದ ಸಮಯದಲ್ಲಿನ ಸಂಕೀರ್ಣ ಸಂದರ್ಭಗಳನ್ನು ನಾನು ನನ್ನ ಕೃತಿಗಳಲ್ಲಿ ತೆರೆದಿಟ್ಟಿದ್ದೇನೆ ಎಂದು ಲೇಖಕಿ ಯಾಂಗ್ ಶುವಾಂಗ್-ಜಿ ಹೇಳಿದ್ದಾರೆ.

ಈ ಪ್ರಶಸ್ತಿಯು ಅಂದಾಜು ₹64 ಲಕ್ಷ (50 ಸಾವಿರ ಪೌಂಡ್) ನಗದು ಒಳಗೊಂಡಿದೆ.

2025ರಲ್ಲಿ ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನ ‘ಹಾರ್ಟ್ ಲ್ಯಾಂಪ್’ ಕೃತಿಗೆ ಬೂಕರ್ ಬಂದಿತ್ತು. ಈ ಪುಸ್ತಕವನ್ನು ದೀಪಾ ಭಾಸ್ತಿ ಅನುವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.