ಬೀಜಿಂಗ್ (ಪಿಟಿಐ): ತೀಸ್ತಾ ನದಿ ಪುನರುಜ್ಜೀವನ ಯೋಜನೆಯನ್ನು ಬೆಂಬಲಿಸುವಂತೆ ಹಾಗೂ ಈ ಯೋಜನೆಯಲ್ಲಿ ಭಾಗಿಯಾಗುವಂತೆ ಬಾಂಗ್ಲಾದೇಶವು ಚೀನಾಕ್ಕೆ ಮನವಿ ಮಾಡಿರುವುದು ಭಾರತದ ಕಳವಳಕ್ಕೆ ಕಾರಣವಾಗಿದೆ.

ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಸದ್ಯ ಚೀನಾ ಪ್ರವಾಸದಲ್ಲಿದ್ದು, ತೀಸ್ತಾ ನದಿ ಸಮಗ್ರ ನಿರ್ವಹಣೆ ಮತ್ತು ಪುನರುಜ್ಜೀವನ ಯೋಜನೆಗೆ (ಟಿಆರ್ಸಿಎಂಆರ್ಪಿ) ಚೀನಾದ ಆರ್ಥಿಕ ನೆರವು ಕೋರಿದ್ದಾರೆ.

ಬಾಂಗ್ಲಾದೇಶದ ವಿದೇಶಾಂಗ ಸಚಿವ ಖಲೀಲುರ್ ರೆಹಮಾನ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಬುಧವಾರ ಬೀಜಿಂಗ್ನಲ್ಲಿ ತೀಸ್ತಾ ನದಿ ಪುನರುಜ್ಜೀವನ ಯೋಜನೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಬಾಂಗ್ಲಾದೇಶದ ಸರ್ಕಾರಿ ಸ್ವಾಮ್ಯದ ಬಿಎಸ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಿಕ್ಕಿಂನಲ್ಲಿ ಹುಟ್ಟಿ, ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದತ್ತ ಹರಿದು ನಂತರ ಬ್ರಹ್ಮಪುತ್ರ ನದಿಯನ್ನು ಸೇರುವ ತೀಸ್ತಾ ನದಿಯನ್ನು ಸಂರಕ್ಷಿಸುವ ಯೋಜನೆ ಇದಾಗಿದೆ. ಆದರೆ, ಚೀನಾ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಅದು ದೇಶದ ಭದ್ರತೆಯ ದೃಷ್ಟಿಯಿಂದ ಒಳಿತಲ್ಲ ಹಾಗೂ ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನನೆಗುದಿಗೆ ಬಿದ್ದಿರುವ ಭಾರತ–ಬಾಂಗ್ಲಾ ಮಾತುಕತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವ ಕಳವಳ ಭಾರತದ್ದು.

ಖಲೀಲುರ್ ರೆಹಮಾನ್ ಜತೆಗೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡೆಸಿದ ಮಾತುಕತೆಯಲ್ಲಿ, ಬಾಂಗ್ಲಾದೇಶದ ಮೂಲಸೌಕರ್ಯ, ಸಾರಿಗೆ, ಉದ್ಯಮ ಕ್ಷೇತ್ರಗಳಲ್ಲಿ ದೀರ್ಘಾವಧಿ ಪಾಲುದಾರಿಕೆ– ಹೂಡಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-1452951528

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.