ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್‌ ಬಿಕ್ಕಟ್ಟು | ನೈಟ್‌ ವಿಷನ್‌ ಗಾಗಲ್ಸ್ ಬಳಸಿ ರಕ್ಷಣಾ ಕಾರ್ಯಾಚರಣೆ!

Published 29 ಏಪ್ರಿಲ್ 2023, 4:05 IST
Last Updated 29 ಏಪ್ರಿಲ್ 2023, 4:05 IST
ಅಕ್ಷರ ಗಾತ್ರ

ಖಾರ್ಟೂಮ್‌ : ಯುದ್ಧ ಪೀಡಿತ ಸುಡಾನ್‌ನ ವಾಡಿ ಸಯ್ಯಿದ್ನಾ ಪ್ರದೇಶದಲ್ಲಿ ರಾತ್ರಿ ವೇಳೆ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯು ಹಲವಾರು ಸವಾಲುಗಳನ್ನು ಎದುರಿಸಿತ್ತು. ಮಾರ್ಗದರ್ಶನ ನೀಡುವ ಯಾವುದೇ ಲ್ಯಾಂಡಿಂಗ್ ಲೈಟ್‌ಗಳಿರದ ಕಾರಣ ನೈಟ್‌ ವಿಷನ್ ಗಾಗಲ್ಸ್‌(ಎನ್‌ವಿಜಿ) ಬಳಸಿ ಲ್ಯಾಂಡಿಂಗ್ ಮತ್ತು ಟೇಕಾಫ್‌ ಮಾಡಬೇಕಾದ ಪರಿಸ್ಥಿತಿ ವಾಯುಪಡೆಗೆ ಬಂದಿತ್ತು.

ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಿಂದ ಸುಮಾರು 40 ಕಿ.ಮೀ ದೂರದಲ್ಲಿ ವಾಡಿ ಸಯ್ಯಿದ್ನಾ ಪ್ರದೇಶವಿದೆ. ಈ ಪ್ರದೇಶದಲ್ಲಿ ಸುಮಾರು 121 ಭಾರತೀಯರು ಸಿಲುಕಿಗೊಂಡಿದ್ದರು. ಇವರನ್ನು ಮರಳಿ ಭಾರತಕ್ಕೆ ತರಲು C-130J ಹೆವಿ ಲಿಫ್ಟ್‌ ವಿಮಾನವು ಏಪ್ರಿಲ್ 27 ಮತ್ತು 28ರಂದು ಎರಡು ದಿನಗಳ ಕಾಲ ಮಧ್ಯರಾತ್ರಿಯ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಹಲವು ಅಡೆತಡೆಗಳು ವಾಯುಪಡೆಗೆ ತಲೆದೋರಿದ್ದು.

ಮೊದಲನೆಯದಾಗಿ ವಿಮಾನ ಲ್ಯಾಂಡ್‌ ಆಗುವ ಮಾರ್ಗದಲ್ಲಿ (ಏರ್‌ಸ್ಟ್ರೀಪ್‌) ವಿಮಾನವನ್ನು ಲ್ಯಾಂಡಿಂಗ್ ಮಾಡುವಾಗ ಮಾರ್ಗದರ್ಶನ ನೀಡುವ ಯಾವುದೇ ಲ್ಯಾಂಡಿಂಗ್ ಲೈಟ್‌ಗಳಿರಲಿಲ್ಲ. ಇದರಿಂದ ನೈಟ್‌ ವಿಷನ್ ಗಾಗಲ್ಸ್‌ಗಳನ್ನು(ಎನ್‌ವಿಜಿ) ಬಳಸಿ ಪೈಲಟ್‌ಗಳು ವಿಮಾನವನ್ನು ಲ್ಯಾಂಡ್‌ ಮಾಡಬೇಕಾಗಿತ್ತು. ಎರಡನೆಯದಾಗಿ ಇಂಧನ ವ್ಯವಸ್ಥೆಯೂ ಇರಲಿಲ್ಲ.

‘ಏರ್‌ಸ್ಟ್ರಿಪ್‌ ಸಮೀಪಿಸುತ್ತಿದ್ದಂತೆ ರನ್‌ವೇ ಅಡೆತಡೆಗಳಿಂದ ಮುಕ್ತವಾಗಿದೆ ಎಂದು ಪರಿಶೀಲಿಸಲು ವಾಯುಪಡೆ ತಂಡವು ಎಲೆಕ್ಟ್ರೋ ಆಪ್ಟಿಕಲ್‌/ ಇನ್‌ಫ್ರಾ ರೆಡ್‌ ಸಂವೇದಕಗಳನ್ನು ಬಳಸಿದರು. ಯಾವುದೇ ಶತ್ರು ಪಡೆ ಸಮೀಪದಲ್ಲಿಲ್ಲ ಎಂದು ಖಚಿತಪಡಿಸಿಕೊಂಡು ವಿಮಾನ ಲ್ಯಾಂಡಿಂಗ್ ಮಾಡಿದರು. ನೈಟ್‌ ವಿಷನ್ ಗಾಗಲ್ಸ್‌ ಮೂಲಕವೇ ಅಡೆತಡೆಗಳನ್ನು ಗುರುತಿಸಿ ಯಶಸ್ವಿಯಾಗಿ ರಕ್ಷಣಾ ಕಾರ್ಯಾಚರಣೆ ಮಾಡಬೇಕಾಯಿತು‘ ಎಂದು ಭಾರತೀಯ ವಾಯುಪಡೆ (ಐಎಎಫ್‌) ಅಧಿಕಾರಿಗಳು ಹೇಳಿದರು.

‘ಲ್ಯಾಂಡಿಂಗ್‌ನಂತೆ ಎನ್‌ವಿಜಿಗಳನ್ನೆ ಬಳಸಿ ವಿಮಾನವನ್ನು ಟೇಕಾಫ್‌ ಮಾಡಬೇಕಾಯಿತು. ವಾಡಿ ಸಯ್ಯಿದ್ನಾ ಮತ್ತು ಜೆಡ್ಡಾ ಪ್ರದೇಶದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆಯು ಕಾಬೂಲ್‌ನ ಕಾರ್ಯಾಚರಣೆಯಂತೆ ಅತ್ಯಂತ ಸವಾಲಿನ ಕೆಲಸವಾಗಿತ್ತು‘ ಎಂದು  ಐಎಎಫ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT