ಸಿಂಗಪುರ: ಭಾರತೀಯ ಮೂಲದ ಮೂವರು ಇಲ್ಲಿನ ಸಂಸತ್ ಸದಸ್ಯರಾಗಿ ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಿದರು.
ಸಂಸತ್ತಿಗೆ ಒಂಬತ್ತು ಜನರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಅವರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದರು. ಇವರ ಪೈಕಿ ಮೂವರು ಭಾರತೀಯರು ಸೇರಿದ್ದಾರೆ.
ವಕೀಲ, ಭದ್ರತಾ ಸಂಘದ ಅಧ್ಯಕ್ಷ ರಾಜ್ ಜೋಶುವಾ ಥಾಮಸ್ ಎರಡನೇ ಅವಧಿಗೆ ಸಂಸದರಾದರು, ಉದ್ಯಮಿ ಪರೇಖ್ ರಜನಿಕಾಂತ್ ಹಾಗೂ ಇತಿಹಾಸಕಾರ್ತಿ, ತೆರಿಗೆ ವಕೀಲೆ ಉಷಾ ರಾಣಿ ಮೊದಲ ಬಾರಿಗೆ ಸಂಸದರಾಗಿ ನೇಮಕವಾಗಿದ್ದಾರೆ.
ಇದೇ ವೇಳೆ, ಸಂಸತ್ತಿನ ನೂತನ ಸ್ಪೀಕರ್ ಆಗಿ ಸೀಹ್ ಕಿಯಾನ್ ಪೆಂಗ್ ಅವರೂ ಪ್ರಮಾಣವಚನ ಸ್ವೀಕರಿಸಿದರು.
ಈ ಹಿಂದೆ ಸ್ಪೀಕರ್ ಆಗಿದ್ದ ತಾನ್ ಚುವಾನ್– ಜಿನ್ ಅವರು ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ರಾಜೀನಾಮೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.