ವಾಷಿಂಗ್ಟನ್: ಭಾರತ ಸೇರಿ ಒಟ್ಟು 16 ದೇಶಗಳ ಮೇಲೆ ಹೊಸ ರೀತಿಯ ಆಮದು ಸುಂಕ ವಿಧಿಸಲು ಅಮೆರಿಕ ಮುಂದಾಗಿದೆ.

‘ನಮ್ಮೊಂದಿಗೆ ವ್ಯಾಪಾರ ನಡೆಸುವ ದೇಶಗಳು, ನಮಗೆ ರಫ್ತು ಮಾಡುವ ಉದ್ದೇಶದಿಂದಲೇ ಅಧಿಕ ಪ್ರಮಾಣದಲ್ಲಿ ಸರಕು ತಯಾರಿಸುತ್ತಿವೆ. ಇದರಿಂದ ನಮ್ಮ ದೇಶದ ತಯಾರಿಕಾ ಕ್ಷೇತ್ರದ ಸಾಮರ್ಥ್ಯವು ಕುಗ್ಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದೇವೆ’ ಎಂದು ಅಮೆರಿಕ ಹೇಳಿದೆ. ಈ ಬಗ್ಗೆ ಇಲ್ಲಿನ ವ್ಯಾಪಾರ ಪ್ರತಿನಿಧಿಗಳ ಇಲಾಖೆಯು ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.

ಚೀನಾ, ಐರೋಪ್ಯ ಒಕ್ಕೂಟ, ಸಿಂಗಪುರ, ಸ್ವಿಟ್ಜರ್ಲೆಂಡ್, ನಾರ್ವೆ, ಇಂಡೊನೇಷ್ಯಾ, ಮಲೇಷ್ಯಾ, ಕಾಂಬೋಡಿಯಾ, ಥಾಯ್ಲೆಂಡ್, ಕೊರಿಯಾ, ವಿಯೆಟ್ನಾಂ, ತೈವಾನ್, ಬಾಂಗ್ಲಾದೇಶ, ಮೆಕ್ಸಿಕೊ, ಜಪಾನ್ ಮತ್ತು ಭಾರತವನ್ನು ಗುರಿಯಾಗಿಸಿ ತನಿಖೆ ನಡೆಯಲಿದೆ.

‘1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301 (ಬಿ) ಅನ್ವಯ ತನಿಖೆ ನಡೆಸಲಾಗುವುದು. ನಮಗೆ ಹೆಚ್ಚಿನ ಪ್ರಮಾಣದ ರಫ್ತು ಮಾಡಬೇಕೆಂಬ ದೃಷ್ಟಿಯಿಂದ ರೂಪಿಸಿಕೊಂಡ ವಿದೇಶಿ ಸರ್ಕಾರಗಳ ನೀತಿಗಳ ಬಗ್ಗೆ ತನಿಖೆ ನಡೆಸಲಾಗುವುದು. ಇಂಥ ನೀತಿಗಳು ಅಮೆರಿಕದ ವ್ಯಾಪಾರದ ಕುರಿತಾಗಿ ತಾರತಮ್ಯದ ಧೋರಣೆ ಹೊಂದಿವೆ ಮತ್ತು ನಮಗೆ ಹೊರೆಯಾಗಿವೆ’ ಎಂದು ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.