ನ್ಯೂಯಾರ್ಕ್: ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿಸಲಾಗುವುದು, ಗ್ರೀನ್ಲ್ಯಾಂಡ್ ಹಾಗೂ ಪನಾಮಾ ಕಾಲುವೆ ಮೇಲೆ ಹಿಡಿತ ಸಾಧಿಸಲಾಗುವುದು, ಗಲ್ಫ್ ಆಫ್ ಮೆಕ್ಸಿಕೊ ಹೆಸರನ್ನು ಗೆಲ್ಫ್ ಆಫ್ ಅಮೆರಿಕಾ ಎಂದು ಮರುನಾಮಕರಣ ಮಾಡಲಾಗುವುದು ಎಂದು ಈಗಾಗಲೇ ಹೇಳಿಕೆ ನೀಡಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದಗ್ರಹಣಕ್ಕೆ ವೇದಿಕೆ ಸಜ್ಜಾಗಿದೆ.

ಅಮೆರಿಕದ ಇತಿಹಾಸದಲ್ಲೇ ತನ್ನದೇ ಆದ ಸ್ಥಾನ ಹೊಂದಿರುವ ಕ್ಯಾಪಿಟಲ್ನ ರೊಟುಂಡಾದಲ್ಲಿ ಟ್ರಂಪ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧ್ಯಕ್ಷರಾಗಿ ಟ್ರಂಪ್ ಅವರ 2ನೇ ಅವಧಿಯಲ್ಲಿನ ಆಡಳಿತವನ್ನು ಇಡೀ ಜಗತ್ತೇ ಎದುರು ನೋಡುತ್ತಿದ್ದು, ಮುಂದಿನ ನಾಲ್ಕು ವರ್ಷಗಳ ಕಾಲ ಅನಿರೀಕ್ಷಿತ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

78 ವರ್ಷದ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಅತ್ಯಂತ ಹಿರಿಯ ಎಂದೆನಿಸಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ರಿಯಾಲಿಟಿ ಟಿವಿ ಸ್ಟಾರ್ ಆಗಿದ್ದ ವ್ಯಕ್ತಿ ದೇಶದ ಉನ್ನತ ಹುದ್ದೆಯನ್ನು 2ನೇ ಬಾರಿಗೆ ಏರಿದ್ದಾರೆ. 2024ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಎರಡು ಬಾರಿ ನಡೆದ ಅವರ ಕೊಲೆ ಯತ್ನದಿಂದ ಪಾರಾಗಿರುವ ಅವರನ್ನು ಅಮೆರಿಕದ ಜನರು ಬೆಂಬಲಿಸಿದರು. ಆ ಮೂಲಕ ಡೆಮಾಕ್ರಟಿಕ್ ಪಕ್ಷದ ನಿರೀಕ್ಷೆ ಮತ್ತು ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರ ಬೆಂಬಲಿಗರ ಒತ್ತಾಸೆ ಮೇಲೆ ಟ್ರಂಪ್ ಗೆಲುವು ತಣ್ಣೀರೆರಚಿತು.

2020ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಶ್ವೇತಭವನ ತೊರೆದಿದ್ದ ಟ್ರಂಪ್, ಈ ಬಾರಿ ಚುನಾವಣೆಯಲ್ಲಿನ ರಿಪಬ್ಲಿಕನ್ ಪಕ್ಷದ ಭರ್ಜರಿ ಗೆಲುವಿನ ಮೂಲಕ ಮರಳಿದ್ದಾರೆ.

ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಅವರ ವಿರುದ್ಧ ಇದ್ದ ಕ್ರಿಮಿನಲ್ ಮೊಕದ್ದಮೆಯು 2024ರ ಚುನಾವಣೆಯಲ್ಲಿ ಅವರ ಸ್ಪರ್ಧೆಯ ಮೇಲೆ ಕರಿಛಾಯೆ ಮೂಡಿಸಿತ್ತು. ತಪ್ಪಿತಸ್ಥ ಎಂದು ನ್ಯಾಯಾಲಯ ಆದೇಶ ಹೊರಡಿಸಿ, ಬೇಷರತ್ ಬಿಡುಗಡೆ ಮಾಡಿತ್ತು. ಆ ಮೂಲಕ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಣೆಯಾದ ಅಮೆರಿಕದ ಮಾಜಿ ಅಧ್ಯಕ್ಷ ಎಂಬ ಕಳಂಕವೂ ಅವರಿಗೆ ಮೆತ್ತಿಕೊಂಡಿತು.

ಮೂವರು ಪತ್ನಿಯರು; 5 ಮಕ್ಕಳು

ಡೊನಾಲ್ಡ್ ಟ್ರಂಪ್ ಅವರು 1946ರ ಜೂನ್ 14ರಂದು ಕ್ವೀನ್ಸ್ನಲ್ಲಿ ಜನಿಸಿದರು. ರಿಯಲ್ ಎಸ್ಟೇಟ್ ಉದ್ಯಮಿಯಾದ ಟ್ರಂಪ್ ಅವರು ಪೆನ್ಸಿಲ್ವೇನಿಯಾದಿಂದ ಫೈನಾನ್ಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1971ರಲ್ಲಿ ತಂದೆಯವರ ಕಂಪನಿಯನ್ನು ಟ್ರಂಪ್ ಮುನ್ನಡೆಸಲಾರಂಭಿಸಿದರು. ನಂತರ ತಮ್ಮ ಉದ್ಯಮವನ್ನು ವಿಸ್ತರಿಸಿದ ಟ್ರಂಪ್, ಹೋಟೆಲು, ರೆಸಾರ್ಟ್, ವಸತಿ ಹಾಗೂ ವಾಣಿಜ್ಯ ಕಟ್ಟಡ, ಕೆಸಿನೊ ಮತ್ತು ಗಾಲ್ಫ್ ಆರಂಭಿಸಿದರು. ನಂತರ ರಿಯಾಲಿಟಿ ಟಿವಿ ಶೋ ಆರಂಭಿಸುವ ಮೂಲಕ ಟ್ರಂಪ್ ಹೆಸರು ಅಮೆರಿಕದಲ್ಲಿ ಮನೆಮಾತಾಯಿತು.

ಚೆಕ್ ಗಣರಾಜ್ಯದ ಅಥ್ಲೀಟ್ ಹಾಗೂ ರೂಪದರ್ಶಿ ಇವಾನಾ ಝೆಲ್ನಿಕೋವಾ ಅವರನ್ನು ಟ್ರಂಪ್ ಅವರು ವಿವಾಹವಾಗಿದ್ದರು. 1990ರಲ್ಲಿ ಅವರಿಗೆ ವಿಚ್ಚೇಧನ ನೀಡಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದಾರೆ. ನಟಿ ಮರ್ಲಾ ಮಾಪೆಲ್ಸ್ ಅವರನ್ನು 1993ರಲ್ಲಿ ವರಿಸಿದ ಟ್ರಂಪ್, 1999ರಲ್ಲಿ ಅವರಿಗೆ ವಿಚ್ಚೇಧನ ನೀಡಿದರು. ಅವರಿಗೆ ಒಂದು ಮಗುವಿದೆ. 2005ರಲ್ಲಿ ಸ್ಲೊವೊಕಿಯಾ ರೂಪದರ್ಶಿ ಮೆಲೇನಿಯಾ ಅವರನ್ನು ವಿವಾಹವಾದರು. ಇವರಿಗೆ ಪುತ್ರ ಇದ್ದಾರೆ.

2016ರಲ್ಲಿ ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಟ್ರಂಪ್ ಅವರು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ಜಯ ಸಾಧಿಸಿದ್ದರು. ಇದೀಗ 2024ರಲ್ಲಿ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ ಅವರು ಆರ್ಥಿಕ ಪುನಶ್ಚೇತನ, ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳಿಂದ ಅಕ್ರಮ ವಲಸೆ ತಡೆಗಟ್ಟುವುದನ್ನೇ ಪ್ರಧಾನ ವಿಷಯವಾಗಿಟ್ಟುಕೊಂಡು ಚುನಾವಣೆ ಎದುರಿಸಿದ್ದರು.

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಭಿನಂಧಿಸುವ ಮೂಲಕ ಬೆಂಬಲ ಕೋರಿದ್ದಾರೆ.

ಟ್ರಂಪ್ ಅವರ ಆಡಳಿತಾವಧಿಯ ಮುಂದಿನ ನಾಲ್ಕು ವರ್ಷಗಳು ಅಮೆರಿಕದ ಆಡಳಿತದಲ್ಲಿ ಏನೆಲ್ಲಾ ಬದಲಾವಣೆ ತರಲಿವೆ ಎಂಬುದಷ್ಟೇ ಅಲ್ಲ, ವಿಶ್ವದ ಇತರ ರಾಷ್ಟ್ರಗಳೊಂದಿಗೆ ಟ್ರಂಪ್ ಸರ್ಕಾರ ಹೇಗೆ ವ್ಯವಹರಿಸಲಿದೆ ಎಂಬುದನ್ನು ಇಡೀ ಜಗತ್ತೇ ಎದುರು ನೋಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.