ವಾಷಿಂಗ್ಟನ್: ಇರಾನ್ ದೇಶವು ಪ್ರಸ್ತುತ ಆಂತರಿಕವಾಗಿ ಕುಸಿದಿದ್ದು, ಹೊರ್ಮುಜ್ ಜಲಸಂಧಿಯನ್ನು ಶೀಘ್ರ ತೆರೆಯಲು ಅಮೆರಿಕಕ್ಕೆ ಮನವಿ ಮಾಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಟ್ರುತ್ ಸೋಶಿಯಲ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಹೊರ್ಮುಜ್ ಜಲಸಂಧಿಯನ್ನು ಆದಷ್ಟು ಬೇಗ ತೆರೆಯಲು ಇರಾನ್ ಬಯಸಿದೆ ಎಂದಿದ್ದಾರೆ.
.Video: ಸೆಲ್ಫಿ ಬೇಕಾದ್ರೆ ನೂರು ರೂ. ಕೊಡಿ: ವೈಭವ್ ಸೂರ್ಯವಂಶಿ ಚೌಕಾಸಿ!.ಕರುವಿನ ಚರ್ಮದ ಬ್ಯಾಗ್ ಹಿಡಿದು ಹಸುವಿಗೆ ಆಹಾರ ನೀಡಿದ ಪಾಪ್ ಗಾಯಕಿ ರಿಹಾನಾ.
ಇರಾನ್ ಪ್ರಸ್ತುತ ತನ್ನ ನಾಯಕತ್ವದ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ದೇಶವು ಅಸ್ಥಿರತೆಯಲ್ಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್ ತನ್ನ ನಾಯಕತ್ವದ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳುವವರೆಗೆ ನಾವು ಹೊರ್ಮುಜ್ ಜಲಸಂಧಿಯನ್ನು ತೆರೆಯಬೇಕೆಂದು ಅವರು ಕೇಳಿಕೊಂಡಿದ್ದಾರೆ ಎಂದು ಟ್ರಂಪ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಟ್ರಂಪ್ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಇರಾನ್ ಸರ್ಕಾರ ಈವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ಯಾವ ಮಾಧ್ಯಮದ ಮೂಲಕ ಈ ಸಂದೇಶವನ್ನು ಅಮೆರಿಕಕ್ಕೆ ತಲುಪಿಸಿದೆ ಎಂಬುದು ಕೂಡ ಇನ್ನೂ ಸ್ಪಷ್ಟವಾಗಿಲ್ಲ.
.ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ಭಾರತಕ್ಕೆ 4 ಚಿನ್ನ.WFIನಿಂದ ಸ್ಪರ್ಧೆಗೆ ತಡೆ ಆರೋಪ: ಕಣಕ್ಕಿಳಿಯಲು ಸಜ್ಜಾದ ವಿನೇಶ್ ಫೋಗಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.