ಶನಿವಾರ, 6 ಜೂನ್ 2026
×
ADVERTISEMENT

ಇರಾನ್‌ ಮೇಲೆ ಹೊಸ ದಾಳಿಗೆ ಟ್ರಂಪ್‌ ಚಿಂತನೆ: ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ

ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಿದ ಅಮೆರಿಕ ಅಧ್ಯಕ್ಷ
Published : 23 ಮೇ 2026, 17:17 IST
Last Updated : 23 ಮೇ 2026, 17:17 IST
ADVERTISEMENT
ಫಾಲೋ ಮಾಡಿ
Comments
‘ಮಗನ ಮದುವೆಗೆ ಹಾಜರಾಗುತ್ತಿಲ್ಲ’:
 ‘ಪ್ರಸಕ್ತ ಸನ್ನಿವೇಶದಲ್ಲಿ ನಾನು ಶ್ವೇತಭವನದಲ್ಲಿ ಉಳಿಯುವುದು ಮುಖ್ಯವಾಗಿದೆ. ಹೀಗಾಗಿ, ವಾರಾಂತ್ಯ ನಡೆಯಲಿರುವ ನನ್ನ ಮಗ ಡಾನ್‌ ಜೂನಿಯರ್‌ ಮದುವೆಗೆ ಹಾಜರಾಗುತ್ತಿಲ್ಲ’ ಎಂದು ಟ್ರಂಪ್‌ ಅವರು ತಮ್ಮ ಒಡೆತನದ ‘ಟ್ರೂಥ್ ಸೋಷಿಯಲ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 
ಹೊರ್ಮುಜ್‌ ಜಲಸಂಧಿ ಕುರಿತಂತೆ ಇರಾನ್‌, ಒಮಾನ್‌ ಸೇರಿ ಈ ಜಲಮಾರ್ಗದೊಂದಿಗೆ ಗಡಿ ಹಂಚಿಕೊಂಡ ದೇಶಗಳ ನಡುವೆ ಒಪ್ಪಂದವಾಗಬೇಕು. ಈ ವಿಚಾರಕ್ಕೂ ಅಮೆರಿಕಕ್ಕೂ ಸಂಬಂಧ ಇಲ್ಲ
ಇಸ್ಮಾಯಿಲ್‌ ಬಾಘೈ ಇರಾನ್‌ ವಿದೇಶಾಂಗ ವಕ್ತಾರ 
ದಾಳಿಗೆ ಭೀಕರ ಪ್ರತ್ಯುತ್ತರ: ಇರಾನ್‌ ಎಚ್ಚರಿಕೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮತ್ತೆ ದಾಳಿ ನಡೆಸಲು ಮುಂದಾದರೆ ‘ಅತಿ ಭೀಕರ’ ಪ್ರತಿದಾಳಿ ನಡೆಸುವುದಾಗಿ ಇರಾನ್‌ ಎಚ್ಚರಿಕೆ ನೀಡಿದೆ. ‘ಕದನ ವಿರಾಮದ ಸಮಯದಲ್ಲಿ ನಮ್ಮ ಸೇನಾ ಪಡೆಗಳನ್ನು ಮತ್ತೆ ಯುದ್ಧಕ್ಕೆ ಸಜ್ಜುಗೊಳಿಸಿದ್ದೇವೆ. ಟ್ರಂಪ್‌ ಅವರು ಮತ್ತೊಂದು ಮೂರ್ಖತನದ ನಿರ್ಧಾರ ಕೈಗೊಂಡು ಯುದ್ಧವನ್ನು ಪುನರಾರಂಭಿಸಿದರೆ ಇರಾನ್‌ ನೀಡುವ ಎದಿರೇಟಿನಿಂದ ಯುದ್ಧ ಆರಂಭಗೊಂಡಾಗ ಆಗಿದ್ದಕ್ಕಿಂತಲೂ ಹೆಚ್ಚು ಹಾನಿಯನ್ನು ಅಮೆರಿಕ ಅನುಭವಿಸಬೇಕಾಗುತ್ತದೆ’ ಎಂದು  ಸಂಸತ್ತಿನ ಸ್ಪೀಕರ್‌ ಮುಖ್ಯ ಸಮಾಲೋಚಕ ಮೊಹಮ್ಮದ್‌ ಬಾಖಿರ್‌ ಖಾಲೀಬಾಫ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌ ಅವರೊಂದಿಗೆ ಮಾತುಕತೆ ನಡೆಸಿದ ಖಾಲೀಬಾಫ್‌ ‘ನಮ್ಮ ದೇಶದ ಸಾರ್ವಭೌಮತ್ವ ಹಾಗೂ ಹಕ್ಕುಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT