ವಾಷಿಂಗ್ಟನ್: ಪೋಪ್ ಲಿಯೋ ಒಬ್ಬ ಉದಾರವಾದಿ ವ್ಯಕ್ತಿ, ಶಾಂತಿ ಕುರಿತು ಮಾತನಾಡುವ ಅವರಿಗೆ ಅಪರಾಧವನ್ನು ನಿಲ್ಲಿಸುವುದರಲ್ಲಿ ನಂಬಿಕೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇತ್ತೀಚೆಗೆ ಇರಾನ್ ಮೇಲಿನ ಯುದ್ಧದ ಕುರಿತು ಪ್ರತಿಕ್ರಿಯಿಸಿದ್ದ ಪೋಪ್ ಲಿಯೋ, ‘ಇರಾನ್ನ ನಾಗರಿಕತೆಯನ್ನು ನಾಶ ಮಾಡುತ್ತೇನೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದು ಸ್ವೀಕಾರಾರ್ಹವಲ್ಲ. ಅವರ ಆಡಳಿತದಲ್ಲಿ ವಲಸೆ ನೀತಿಗಳಿಂದ ಲಕ್ಷಾಂತರ ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರವನ್ನು ಪ್ರದರ್ಶಿಸಿದ್ದು ಸಾಕು. ಈ ಯುದ್ಧ ಸಾಕು' ಎಂದು ಟೀಕಿಸಿದ್ದರು.

ಅಪರಾಧಗಳ ಕುರಿತು ಮೃದುಧೋರಣೆ ಹೊಂದಿರುವ ಪೋಪ್ ಲಿಯೋ, ಅವರಿಗೆ ವಿದೇಶಾಂಗ ನೀತಿಯ ಕುರಿತು ಏನೂ ಗೊತ್ತಿಲ್ಲ. ನಾನು ಅವರ ಅಭಿಯಾನಿಯಲ್ಲ, ಅವರು ಪೋಪ್ ಆಗಿ ತನ್ನ ಕಾರ್ಯವನ್ನು ಮಾಡಿದರೆ ಸಾಕು ಎಂದು ಟ್ರಂಪ್ ಅವರು ಸಾಮಾಜಿಕ ಜಾಲತಾಣ ಟ್ರುಥ್ನಲ್ಲಿ ಬರೆದುಕೊಂಡಿದ್ದಾರೆ.

ಫೆ.28ರಂದು ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಇತ್ತೀಚೆಗೆ ಎರಡು ವಾರಗಳ ಕದನ ವಿರಾಮ ಘೋಷಿಸಲಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯು ಕೂಡ ಫಲಪ್ರದವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.