ವಾಷಿಂಗ್ಟನ್/ಇಸ್ಲಾಮಾಬಾದ್: ಇರಾನ್ ವಿರುದ್ಧದ ಎರಡು ವಾರಗಳ ಕದನ ವಿರಾಮ ಮುಕ್ತಾಯಗೊಳ್ಳುವ ಕೆಲವೇ ಗಂಟೆಗಳ ಮುನ್ನ, ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅದನ್ನು ಇರಾನ್ ಒಪ್ಪಿಕೊಂಡಿದೆ.

ಈ ಮೂಲಕ ಏಳು ವಾರಗಳಿಂದ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಇರಾನ್ಗೆ ಒಮ್ಮತದ ಪ್ರಸ್ತಾವ ಮಂಡಿಸಲು ಅಮೆರಿಕ ಇನ್ನಷ್ಟು ಸಮಯಾವಕಾಶ ಕಲ್ಪಿಸಿದೆ. ಮಧ್ಯವರ್ತಿ ಪಾಕಿಸ್ತಾನದ ಕೋರಿಕೆಯ ಮೇರೆಗೆ ಕದನ ವಿರಾಮ ವಿಸ್ತರಿಸಲು ಒಪ್ಪಿಕೊಂಡಿದ್ದಾಗಿ ಟ್ರಂಪ್ ಹೇಳಿದ್ದಾರೆ. ‘ಎರಡನೇ ಸುತ್ತಿನ ಶಾಂತಿ ಮಾತುಕತೆ ಶುಕ್ರವಾರ ಪ್ರಾರಂಭವಾಗಬಹುದು’ ಎಂದೂ ಅವರು ಹೇಳಿದ್ದಾರೆ.

ಕದನ ವಿರಾಮ ವಿಸ್ತರಣೆಯ ಘೋಷಣೆ ಹೊರಬಿದ್ದ ಕೆಲ ಕ್ಷಣಗಳಲ್ಲಿಯೇ ಹೊರ್ಮುಜ್ ಜಲಸಂಧಿ ದಾಟಲು ಯತ್ನಿಸಿದ ಮೂರು ಹಡಗುಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದ್ದು, ಅವುಗಳಲ್ಲಿ ಎರಡನ್ನು ವಶಕ್ಕೆ ಪಡೆದಿದೆ. ಇದು ಕದನ ವಿರಾಮ ಮತ್ತು ಶಾಂತಿ ಮಾತುಕತೆ ಕುರಿತು ಅನಿಶ್ಚಿತತೆ ಮೂಡುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ತನ್ನ ಪ್ರದೇಶದಲ್ಲಿ ಉಳಿದಿರುವ ಆಸ್ತಿಯ ರಕ್ಷಣೆಗಾಗಿ ಶತ್ರುಗಳ ವಿರುದ್ಧ ಕಲ್ಪನೆಗೂ ಮೀರಿದ ಹೊಡೆತಗಳನ್ನು ನೀಡುತ್ತೇವೆ’ ಎಂದು ಐಆರ್ಜಿಸಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದೆ.

ಇನ್ನೂ ನಿರ್ಧರಿಸಿಲ್ಲ– ಇರಾನ್

ಅಮೆರಿಕದ ಜತೆಗಿನ ಹೊಸ ಸುತ್ತಿನ ಮಾತುಕತೆಯಲ್ಲಿ ಭಾಗಿಯಾಗಬೇಕೇ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಇರಾನ್ ಹೇಳಿದೆ.

‘ನಾವು ಉತ್ತಮ ನಂಬಿಕೆ ಮತ್ತು ಘನತೆಯಿಂದ ಮಾತುಕತೆಗೆ ಮುಂದಾಗಿದ್ದೆವು. ಆದರೆ ಅಮೆರಿಕವು ನಿರ್ಲಕ್ಷ್ಯ ಧೋರಣೆ ತೋರಿದ್ದೇ ಅಲ್ಲದೆ ನಂಬಿಕೆಯನ್ನು ಹುಸಿಯಾಗಿಸಿತು’ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಯಿ ತಿಳಿಸಿದ್ದಾರೆ.

ನಿಲುವು ಬದಲಿಸಿದ ಟ್ರಂಪ್: ಕದನ ವಿರಾಮ ವಿಸ್ತರಿಸುವುದಿಲ್ಲ, ಇರಾನ್ ಒಪ್ಪಂದಕ್ಕೆ ಬರದಿದ್ದರೆ ಬಾಂಬ್ಗಳ ಸುರಿಮಳೆಯಾಗಲಿದೆ, ಅದಕ್ಕಾಗಿ ಸೇನೆ ಉತ್ಸುಕವಾಗಿದೆ ಎಂದು ಮಂಗಳವಾರವಷ್ಟೇ ಹೇಳಿದ್ದ ಟ್ರಂಪ್, ಬುಧವಾರ ದಿಢೀರ್ ನಿಲುವು ಬದಲಿಸಿದರು.

‘ಇರಾನ್ ಈಗಾಗಲೇ ಛಿದ್ರವಾಗಿದೆ, ಅದು ಅನಿರೀಕ್ಷಿತವಲ್ಲ. ಇರಾನ್ ನಾಯಕತ್ವವು ಒಮ್ಮತದ ಪ್ರಸ್ತಾವದೊಂದಿಗೆ ಬರುವುದಕ್ಕಾಗಿ ದಾಳಿಯನ್ನು ತಡೆಹಿಡಿಯುವಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ವಿನಂತಿಸಿದ್ದರು’ ಎಂದು ಟ್ರಂಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ಕಾರಣಕ್ಕಾಗಿ ಮಾತ್ರ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸುವುದನ್ನು ತಡೆಯುತ್ತದೆ. ಆದರೆ ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ಜಾರಿಯಲ್ಲಿರುತ್ತದೆ’ ಎಂದು ಅವರು ಹೇಳಿದ್ದಾರೆ. ದಿಗ್ಬಂಧನ ಮುಂದುವರಿಸುವಂತೆ ಸೇನೆಗೆ ನಿರ್ದೇಶಿಸಿದ್ದೇನೆ ಎಂದೂ ಅವರು ಹೇಳಿದ್ದಾರೆ.

ದಿಗ್ಬಂಧನದ ವಿರುದ್ಧ ಇರಾನ್ ಕಿಡಿ: ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ಮುಂದುವರಿಸುವ ಅಮೆರಿಕದ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ, ‘ಇದು ಯುದ್ಧದ ಕ್ರಿಯೆಯಾಗಿದ್ದು, ಕದನ ವಿರಾಮದ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಿದ್ದಾರೆ.

‘ವಾಣಿಜ್ಯ ಹಡಗುಗಳನ್ನು ಹೊಡೆದು ಅದರ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಳ್ಳುವುದು ಇನ್ನೂ ದೊಡ್ಡ ಉಲ್ಲಂಘನೆ. ನಿರ್ಬಂಧಗಳನ್ನು ತೆರವುಗೊಳಿಸುವುದು, ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದು, ಬೆದರಿಸುವಿಕೆಯನ್ನು ಎದುರಿಸುವುದು ಹೇಗೆ ಎಂಬುದು ಇರಾನ್ಗೆ ಚೆನ್ನಾಗಿ ಗೊತ್ತಿದೆ’ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ರಂಪ್ಗೆ ಧನ್ಯವಾದ ಹೇಳಿದ ಪಾಕ್ ಪ್ರಧಾನಿ: ಕದನ ವಿರಾಮ ವಿಸ್ತರಿಸಿದ್ದಕ್ಕಾಗಿ ಶೆಹಬಾಜ್ ಷರೀಫ್ ಅವರು ಡೊನಾಲ್ಡ್ ಟ್ರಂಪ್ಗೆ ಧನ್ಯವಾದ ಹೇಳಿದ್ದಾರೆ. ಸಂಘರ್ಷ ಅಂತ್ಯಗೊಳಿಸುವುದಕ್ಕೆ ಪೂರಕವಾಗಿ ಎರಡೂ ಕಡೆಯವರು ಸಮಗ್ರ ಶಾಂತಿ ಒಪ್ಪಂದಕ್ಕೆ ಬರಲು ಇದರಿಂದ ಸಾಧ್ಯವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

‘ರಾಜತಾಂತ್ರಿಕ ಪ್ರಯತ್ನಗಳು ಸರಿಯಾದ ಹಾದಿಯಲ್ಲಿ ಸಾಗಲು ಕದನ ವಿರಾಮ ವಿಸ್ತರಿಸುವಂತೆ ನಾನು ಮತ್ತು ಆಸಿಮ್ ಮುನೀರ್ ವಿನಂತಿಸಿದ್ದೆವು. ಅದಕ್ಕೆ ಸಮ್ಮತಿಸಿದ್ದಕ್ಕಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ’ ಎಂದು ಷರೀಫ್ ಹೇಳಿದ್ದಾರೆ.

‘ನಂಬಿಕೆ ಮತ್ತು ವಿಶ್ವಾಸದೊಂದಿಗೆ ಪಾಕಿಸ್ತಾನವು ಸಂಘರ್ಷ ಶಮನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

ಇದರ ನಡುವೆಯೇ ಇರಾನ್, ಟರ್ಕಿ, ಯುಎಇಯಲ್ಲಿ ನೆಲಸಿರುವ 14 ವ್ಯಕ್ತಿಗಳು, ಸಂಸ್ಥೆಗಳು ಮತ್ತು ವಿಮಾನಗಳ ಮೇಲೆ ಅಮೆರಿಕದ ಆರ್ಥಿಕ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ನಿರ್ಬಂಧಗಳನ್ನು ಘೋಷಿಸಿದ್ದಾರೆ. ಇರಾನ್ ಆಡಳಿತದ ಪರವಾಗಿ ಶಸ್ತ್ರಾಸ್ತ್ರ ಸಂಗ್ರಹಿಸುವ ಮತ್ತು ಸಾಗಿಸುವ ಕಾರ್ಯದಲ್ಲಿ ಭಾಗಿಯಾಗಿದೆ ಎಂಬ ಆರೋಪಗಳ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

ಮೂರು ಹಡಗುಗಳ ಮೇಲೆ ಇರಾನ್ ದಾಳಿ

ದುಬೈ: ಕದನ ವಿರಾಮ ವಿಸ್ತರಣೆ ಘೋಷಣೆಯ ಬೆನ್ನಲ್ಲೇ ಹೊರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೆಲೆ ಇರಾನ್ ದಾಳಿ ಮಾಡಿದೆ. ಇದು ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಾಗಿ ನಡೆಯುತ್ತಿರುವ ಪ್ರಯತ್ನಕ್ಕೆ ಹಿನ್ನಡೆ ಉಂಟುಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಂಟೇನರ್ಗಳಿದ್ದ ಹಡಗಿನ ಮೇಲೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್ಜಿಸಿ) ದಾಳಿ ಮಾಡಿ, ಹಾನಿಗೊಳಿಸಿದೆ. ಆದರೆ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಬ್ರಿಟಿಷ್ ಸೇನೆ ಹೇಳಿದೆ. ಮತ್ತೊಂದು ಹಡಗಿನ ಮೇಲೂ ಗುಂಡಿನ ದಾಳಿಗಳು ನಡೆದಿದ್ದು, ಹೆಚ್ಚಿನ ಹಾನಿಯಾಗಿಲ್ಲ ಎಂದು ‘ದಿ ಯುನೈಟೆಡ್ ಕಿಂಗ್ಡಮ್ ಮೇರಿಟೈಮ್ ಟ್ರೇಡ್ ಆರ್ಗನೈಸೇಷನ್’ ಹೇಳಿದೆ.

ಪನಾಮ ಧ್ವಜ ಹೊಂದಿದ್ದ ಎಂಎಸ್ಸಿ ಫ್ರಾನ್ಸೆಸ್ಕಾ ಸರಕು ಹಡಗಿನ ಮೇಲೂ ಗುಂಡಿನ ದಾಳಿ ನಡೆದಿದ್ದು, ಅಲ್ಪ ಪ್ರಮಾಣದ ಹಾನಿಯಾಗಿದೆ ಎಂಬುದಾಗಿ ಬಿಬಿಸಿ ವರದಿ ಮಾಡಿದೆ.

ಕದನ ವಿರಾಮ ವಿಸ್ತರಣೆಯ ಘೋಷಣೆಯು ಅಮೆರಿಕ ಮತ್ತು ಇರಾನ್ ನಡುವೆ ರಾಜತಾಂತ್ರಿಕ ಮತ್ತು ವಿಶ್ವಾಸ ವೃದ್ಧಿಗೆ ನೆರವಾಗಲಿದೆ
ಆಂಟೊನಿಯೊ ಗುಟೆರೆಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಭಾರತದ ಭದ್ರತೆ ಮತ್ತು ಆರ್ಥಿಕ ಸ್ಥಿರತೆ ಮೇಲೆ ಬೀರುತ್ತಿರುವ ಪರಿಣಾಮವನ್ನು ಎದುರಿಸಲು ಸಂಘಟಿತ ಕಾರ್ಯತಂತ್ರ ಅಳವಡಿಸಿಕೊಂಡಿದ್ದೇವೆ
ರಾಜನಾಥ ಸಿಂಗ್, ರಕ್ಷಣಾ ಸಚಿವ

ದಿನದ ಬೆಳವಣಿಗೆಗಳು

* ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮ ವಿಸ್ತರಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ ಎಂದು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ತಿಳಿಸಿದ್ದಾರೆ

* ಇಸ್ರೇಲ್ ಪರವಾಗಿ ಗೂಢಚಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಗೆ ಇರಾನ್ ಬುಧವಾರ ಮರಣದಂಡನೆ ಜಾರಿಗೊಳಿಸಲಾಗಿದೆ

* ಹೊರ್ಮುಜ್ ಜಲಸಂಧಿಯಲ್ಲಿ ಸಮುದ್ರದೊಳಗಿನ ಕೇಬಲ್ಗಳು ದುರ್ಬಲವಾಗಿವೆ ಎಂದು ಇರಾನಿನ ಸುದ್ದಿ ಸಂಸ್ಥೆ ಹೇಳಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.