ವಾಷಿಂಗ್ಟನ್: ಟೆಹರಾನ್ ಮೇಲೆ ನಡೆಸಿದ ದಾಳಿಯ ವಿಡಿಯೊ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಸೇನೆಯ ಹಲವು ನಾಯಕರನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ತಮ್ಮದೇ ಒಡೆತನದ 'ಟ್ರುತ್ ಸೋಶಿಯಲ್' ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಡಿಯೊ ಜೊತೆಗೆ, 'ಇರಾನ್ ಸೇನೆಯನ್ನು ಕೆಟ್ಟದಾಗಿ ಮುನ್ನಡೆಸಿದ್ದ ಹಲವು ನಾಯಕರನ್ನು, ಟೆಹರಾನ್ ಮೇಲಿನ ಬೃಹತ್ ದಾಳಿಯೊಂದಿಗೆ ಕೊನೆಗಾಣಿಸಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ಈ ದಾಳಿ ವೇಳೆ ಯಾರೆಲ್ಲ ಹತ್ಯೆಯಾಗಿದ್ದಾರೆ ಎಂಬ ವಿವರವನ್ನು ಟ್ರಂಪ್ ಬಹಿರಂಗಪಡಿಸಿಲ್ಲ.

ಏತನ್ಮಧ್ಯೆ, ಇರಾನ್ ಸೇನೆಯು ಹೊಸದಾಗಿ ದಾಳಿ ಆರಂಭಿಸಿರುವುದಾಗಿ ಘೋಷಿಸಿದೆ. ಅದೇ ವೇಳೆ, ಯೆಮನ್ನಿಂದ ಉಡಾಯಿಸಲಾದ ಕ್ಷಿಪಣಿಯನ್ನು ಪತ್ತೆಹಚ್ಚಿರುವುದಾಗಿ ಇಸ್ರೇಲ್ ತಿಳಿಸಿದೆ.

ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ 48 ಗಂಟೆಗಳ ಒಳಗೆ ಒಪ್ಪಂದಕ್ಕೆ ಬರದಿದ್ದರೆ, ಇರಾನ್ಗೆ ನರಕ ತೋರಿಸುತ್ತೇವೆ ಎಂದು ಟ್ರಂಪ್ ಶನಿವಾರ ಗುಡುಗಿದ್ದರು. ಆದಾಗ್ಯೂ, ಈ ಬೆದರಿಕೆಗೆ ಇರಾನ್ ಸೊಪ್ಪು ಹಾಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.