ವಾಷಿಂಗ್ಟನ್: ಇರಾನ್ ಜೊತೆ ಶಾಂತಿ ಮಾತುಕತೆ ಹಾಗೂ ಹೊರ್ಮುಜ್ ಜಲಸಂಧಿ ತೆರೆಯುವ ಸಂಬಂಧ ಅಂತಿಮ ಒಪ್ಪಂದ ಏರ್ಪಡುವ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಆದರೆ ಟ್ರಂಪ್ ಹೇಳಿಕೆಯನ್ನು ಇರಾನ್ನ ಮಾಧ್ಯಮಗಳು ಅಲ್ಲಗಳೆದಿವೆ.

ಒಪ್ಪಂದದ ಅಂತಿಮ ಕರಡು ಹಾಗೂ ವಿವರಗಳನ್ನು ಚರ್ಚಿಸಲಾಗುತ್ತದೆ. ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಟ್ರುಥ್ನಲ್ಲಿ ಪೋಸ್ಟ್ ಮಾಡಿದ್ದಾರೆ.
.ಶ್ವೇತಭವನದ ಸಮೀಪ ಗುಂಡಿನ ಚಕಮಕಿ: ಬಂದೂಕುಧಾರಿಯ ಹತ್ಯೆ.ಟ್ರಂಪ್ ಪರವಾಗಿ ಪ್ರಧಾನಿ ಮೋದಿಗೆ ಶ್ವೇತಭವನಕ್ಕೆ ಆಹ್ವಾನ ನೀಡಿದ ರೂಬಿಯೋ.
ಈ ಸಂಬಂಧ ಶನಿವಾರದಂದು ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡನ್, ಈಜಿಪ್ಟ್, ಟರ್ಕಿ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.

'ಶಾಂತಿಗೆ ಸಂಬಂಧಿಸಿದ ಕರಡು ಪತ್ರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ನಾವು ಮಾತುಕತೆ ನಡೆಸಿದ್ದೇವೆ. ನಾನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೂ ಕರೆ ಮಾಡಿ ಮಾತುಕತೆ ನಡೆಸಿದ್ದೇನೆ' ಎಂದು ತಿಳಿಸಿದ್ದಾರೆ.

'ಪ್ರಸ್ತುತ ಒಪ್ಪಂದದ ಅಂತಿಮ ಅಂಶಗಳು ಹಾಗೂ ವಿವರಗಳ ಕುರಿತು ಚರ್ಚಿಸಲಾಗುತ್ತಿದೆ. ಹೊರ್ಮುಜ್ ಜಲಸಂಧಿಯನ್ನು ಸದ್ಯದಲ್ಲೇ ತೆರೆಯಲಾಗುವುದು. ಈ ಕುರಿತು ಶೀಘ್ರದಲ್ಲೇ ಪ್ರಕಟಿಸಲಾಗುವುದು' ಎಂದು ತಿಳಿಸಿದ್ದಾರೆ.

ಫೆಬ್ರುವರಿಯಲ್ಲಿ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ ನಂತರ ಸಂಘರ್ಷ ಆರಂಭವಾಗಿತ್ತು. ಬಳಿಕ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ್ದರಿಂದ ಜಾಗತಿಕ ತೈಲ ಪೂರೈಕೆ ಸರಪಳಿಗೆ ಅಡಚಣೆಯುಂಟಾಗಿತ್ತು.

60 ದಿನಗಳ ಕದನ ವಿರಾಮ…

'ಫೈನಾನ್ಷಿಯಲ್ ಟೈಮ್ಸ್' ವರದಿಯ ಪ್ರಕಾರ, ಅಮೆರಿಕ ಹಾಗೂ ಇರಾನ್ ಕದನ ವಿರಾಮವನ್ನು 60 ದಿನಗಳವರೆಗೆ ವಿಸ್ತರಿಸುವ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಈ ಒಪ್ಪಂದದ ಅಡಿಯಲ್ಲಿ 'ಹೊರ್ಮುಜ್ ಜಲಸಂಧಿ'ಯನ್ನು ಹಂತಹಂತವಾಗಿ ಪುನಃ ತೆರೆಯಲಾಗುವುದು ಮತ್ತು ಇರಾನ್ ತನ್ನಲ್ಲಿರುವ ಸಮೃದ್ಧ ಯುರೇನಿಯಂ ದಾಸ್ತಾನುಗಳನ್ನು ಕಡಿಮೆ ಮಾಡುವ ಅಥವಾ ಹಸ್ತಾಂತರಿಸುವ ಬದ್ಧತೆಯನ್ನು ಒಳಗೊಂಡಿದೆ. ಇದಕ್ಕೆ ಪ್ರತಿಯಾಗಿ, ಇರಾನ್ನ ಬಂದರುಗಳ ಮೇಲಿನ ದಿಗ್ಬಂಧನವನ್ನು ಅಮೆರಿಕ ಸಡಿಲಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.