ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಳ್ಮೆ ಕಳೆದುಕೊಂಡು ಇರಾನ್ ಅನ್ನು ಅಶ್ಲೀಲ ಪದಗಳಲ್ಲಿ ನಿಂದಿಸಿದ್ದಾರೆ. ಮುಂದಿನ 48 ಗಂಟೆಗಳ ಗಡುವಿನೊಳಗೆ ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ನರಕ ನೋಡಬೇಕಾದೀತು ಎಂಬ ಎಚ್ಚರಿಕೆಯ ಮಾತನ್ನೂ ಪುನರುಚ್ಚರಿಸಿದ್ದಾರೆ.

‘ಮಂಗಳವಾರದವರೆಗೆ ಮಾತ್ರ ಗಡುವು. ಆನಂತರ ಇರಾನ್ನ ವಿದ್ಯುತ್ ಸ್ಥಾವರ, ಸೇತುವೆಗಳ ಮೇಲೆ ದಾಳಿ ನಡೆಸಬೇಕಾದೀತು. ಅಷ್ಟು ತೀವ್ರ ಸ್ವರೂಪದ ದಾಳಿಯನ್ನು ನೀವು ನೋಡಿರ ಲಿಕ್ಕಿಲ್ಲ. ಹುಚ್ಚು ಕಿಡಿಗೇಡಿಗಳೇ, ಆ ಜಲಸಂಧಿಯನ್ನು ತೆರೆಯಿರಿ. ಇಲ್ಲದಿದ್ದರೆ, ನೀವು ನರಕ ದರ್ಶನ ಮಾಡುವಿರಿ. ಸುಮ್ಮನೆ ಕಾದು ನೋಡಿ. ಅಲ್ಲಾಹ ಸ್ತೋತ್ರ ಮಾಡುವ ಕಾಲ ಬಂದೀತು’ ಎಂದು ಟ್ರೂಥ್ ಸೋಷಿಯಲ್ನಲ್ಲಿ ಬರೆದಿದ್ದಾರೆ.

ಈ ಹಿಂದೆಯೇ ಟ್ರಂಪ್ ಅವರು ಇರಾನ್ಗೆ ಹೊರ್ಮುಜ್ ಜಲಸಂಧಿಯನ್ನು ಹಡಗು ಗಳ ಸಂಚಾರಕ್ಕೆ ಮುಕ್ತಗೊಳಿಸುವಂತೆ ಗಡುವು ನೀಡುತ್ತಾ ಬಂದಿದ್ದರು. ಕೆಲವು ದೇಶಗಳ ಮಧ್ಯಸ್ಥಿಕೆ ಮಾತಿಗೆ ಮಣಿದು, ಗಡುವನ್ನು ವಿಸ್ತರಿಸಿ ದ್ದರು. ಅವರ ಎಚ್ಚರಿಕೆಯ ಮಾತಿಗೆ ಜಗ್ಗದೆ ಇರಾನ್
ಪ್ರತಿದಾಳಿಗಳನ್ನು ನಡೆಸಿತ್ತು.

ತಮ್ಮ ದೇಶದ ಸೇನಾ ವಿಮಾನದ ಪೈಲಟ್ ಅನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ನಂತರ ಟ್ರಂಪ್ ಅಶ್ಲೀಲ ಪದ ಗಳನ್ನು ಬಳಸಿ, ಇರಾನ್ಗೆ ಕಟುವಾದ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.