ವಾಷಿಂಗ್ಟನ್: ಇರಾನ್ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳಂತಹ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಯುದ್ಧಾಪರಾಧ ಎಂಬ ಟೀಕೆಗಳನ್ನು ತಳ್ಳಿಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಇರಾನಿಯನ್ನರನ್ನು ಪ್ರಾಣಿಗಳಿಗೆ' ಹೋಲಿಸುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಇರಾನ್ ವಿರುದ್ಧದ ಸಂಘರ್ಷದ ವಿಚಾರದಲ್ಲಿ ಟ್ರಂಪ್ ಅವರ ವಿರೋಧಾಭಾಸದ ಹೇಳಿಕೆಗಳು ಮುಂದುವರಿದಿವೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಇರಾನ್ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದರೂ, ಅಧ್ಯಕ್ಷ ಟ್ರಂಪ್ ಅದಕ್ಕೆ ಸೊಪ್ಪು ಹಾಕಿಲ್ಲ. ಅಂತಹ ದಾಳಿಗಳು ಯುದ್ಧಾಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ.
.45 ದಿನಗಳ ಕದನ ವಿರಾಮ ಪ್ರಸ್ತಾವ ಇರಾನ್ನಿಂದ ತಿರಸ್ಕಾರ .ಮೈಸೂರು | ಗುಂಡೇಟಿನಿಂದ ಚಿರತೆ ಸಾವು: ತನಿಖೆಗೆ ಸಚಿವ ಖಂಡ್ರೆ ಆದೇಶ.
ಇರಾನ್ ಯುದ್ಧದಲ್ಲಿ 45 ದಿನಗಳ ಕಾಲ ಕದನ ವಿರಾಮ ಘೋಷಿಸುವ ಪ್ರಸ್ತಾವನೆಯನ್ನು ಅಮೆರಿಕ ಪರಿಶೀಲಿಸುತ್ತಿದೆ. ಇದನ್ನು 'ಅತ್ಯಂತ ಮಹತ್ವದ ಹೆಜ್ಜೆ' ಎಂದು ಟ್ರಂಪ್ ಕರೆದಿದ್ದಾರೆ.

'ಇರಾನ್ ತಂಡದೊಂದಿಗೆ ಸದ್ಯ ಮಾತುಕತೆಗಳು ನಡೆಯುತ್ತಿವೆ. ಫಲಿತಾಂಶ ಏನಾಗಲಿದೆ ಎಂದು ಕಾದು ನೋಡೋಣ' ಎಂದು ಅವರು ತಿಳಿಸಿದ್ದಾರೆ.

ಈ ಹಿಂದಿನ ವೈಮಾನಿಕ ದಾಳಿಗಳಲ್ಲಿ ಹತರಾದ ನಾಯಕರಿಗಿಂತ, ಈಗಿನ ಇರಾನ್ ಪ್ರತಿನಿಧಿಗಳು ಕಡಿಮೆ ಉಗ್ರಗಾಮಿ ಧೋರಣೆ ಹೊಂದಿದ್ದಾರೆ. 'ಈ ತಂಡವು ಹೆಚ್ಚು ಬುದ್ಧಿವಂತಿಕೆಯಿಂದ ಕೂಡಿದೆ ಎಂದು ನಾವು ಭಾವಿಸುತ್ತೇವೆ' ಎಂದು ಟ್ರಂಪ್ ಹೇಳಿದ್ದಾರೆ.
.ವಿದೇಶ ವಿದ್ಯಮಾನ: ಪ್ಯಾಲೆಸ್ಟೀನ್ ಕಣ್ಣೀರು.ಇರಾನ್ನಿಂದ ಕದನ ವಿರಾಮ ಪ್ರಸ್ತಾವ ತಿರಸ್ಕಾರ: 4 ಗಂಟೆಯಲ್ಲಿ ಸರ್ವನಾಶ ಎಂದ ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.