ವಾಷಿಂಗ್ಟನ್: ಇರಾನ್ ಮೇಲೆ ನಡೆಸುವ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ.

‘ದಾಳಿಯನ್ನು ಪುನರಾರಂಭಿಸುವ ಬದಲು ಒಪ್ಪಂದ ಮಾಡಿಕೊಳ್ಳಲು ಟ್ರಂಪ್ ಒಲವು ತೋರುತ್ತಿದ್ದಾರೆ’ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

‘ಟ್ರಂಪ್ ಅವರೊಂದಿಗಿನ ಸಂಭಾಷಣೆ ನಂತರ ನೆತನ್ಯಾಹು ಅವರು ಆತಂಕಗೊಂಡಿದ್ದಾರೆ’ ಎಂದು ಅಮೆರಿಕದ ಮಾಧ್ಯಮ ಸಂಸ್ಥೆ ‘ಆಕ್ಸಿಯೋಸ್’ ಬುಧವಾರ ವರದಿ ಮಾಡಿದೆ.

‘ಇರಾನ್ನ ಸೇನಾ ಸಾಮರ್ಥ್ಯಗಳನ್ನು ಮತ್ತಷ್ಟು ಕುಗ್ಗಿಸಲು ಮತ್ತು ಅದರ ಪ್ರಮುಖ ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವ ಮೂಲಕ ಅಲ್ಲಿನ ಆಡಳಿತವನ್ನು ದುರ್ಬಲಗೊಳಿಸಲು, ದಾಳಿಗಳನ್ನು ಪುನರಾರಂಭಿಸಲು ಇಸ್ರೇಲ್ ಪ್ರಧಾನಿ ಉತ್ಸುಕರಾಗಿದ್ದಾರೆ’ ಎಂದು ಹೇಳಿದೆ.

‘ಕತಾರ್ ಮತ್ತು ಯುಎಇ ಸೇರಿದಂತೆ ಅರಬ್ ರಾಷ್ಟ್ರಗಳ ಮನವಿ ಮೇರೆಗೆ ಇರಾನ್ ಮೇಲೆ ನಡೆಸಲು ಯೋಜಿಸಿದ್ದ ದಾಳಿಯನ್ನು ಮುಂದೂಡಲಾಗಿದೆ’ ಎಂದು ಟ್ರಂಪ್ ಅವರು ಭಾನುವಾರ ತಿಳಿಸಿದ್ದರು.

ಅಮೆರಿಕ ಮತ್ತು ಇರಾನ್ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಪ್ರಾದೇಶಿಕ ಸಂಧಾನಕಾರರ ಸಲಹೆಗಳನ್ನು ಪಡೆದು ಕತಾರ್ ಮತ್ತು ಪಾಕಿಸ್ತಾನ ಪರಿಷ್ಕೃತ ಶಾಂತಿ ಪತ್ರವನ್ನು ಸಿದ್ಧಪಡಿಸಿವೆ ಎಂದು ‘ಆಕ್ಸಿಯೋಸ್’ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಮಾತುಕತೆಗಳ ಬಗ್ಗೆ ನೆತನ್ಯಾಹು ಅವರು ತೀವ್ರ ಸಂಶಯ ವ್ಯಕ್ತಪಡಿಸಿದ್ದಾರೆ.

ಒಪ್ಪಂದ ಮಾಡಿಕೊಳ್ಳಬಹುದು ಎಂದು ಟ್ರಂಪ್ ಹೇಳುತ್ತಲೇ ಇದ್ದಾರೆ. ಆದರೆ, ಅದು ಸಾಧ್ಯವಾಗದಿದ್ದರೆ ಯುದ್ಧವನ್ನು ಪುನರಾರಂಭಿಸಲು ಅವರು ಸಿದ್ಧರಿದ್ದಾರೆ.

‘ಇದು ತೀರ ಸೂಕ್ಷ್ಮ ಹಂತದಲ್ಲಿರುವ ವಿಚಾರ. ನಮಗೆ ಸರಿಯಾದ ಉತ್ತರಗಳು ಸಿಗದಿದ್ದರೆ, ಪರಿಸ್ಥಿತಿ ಕೈಮೀರಿ ಹೋಗುತ್ತದೆ. ನಾವೆಲ್ಲರೂ ಹೊರಡಲು ಸಿದ್ಧರಾಗಿದ್ದೇವೆ. ನಮಗೆ ಸರಿಯಾದ ಉತ್ತರಗಳು ಸಿಗಲೇಬೇಕು. ಅದು ನೂರಕ್ಕೆ ನೂರರಷ್ಟು ಉತ್ತಮ ಉತ್ತರಗಳಾಗಿರಬೇಕು’ ಎಂದು ಟ್ರಂಪ್ ಅವರು ಕನೆಕ್ಟಿಕಟ್ನ ಕೋಸ್ಟ್ ಗಾರ್ಡ್ ಅಕಾಡೆಮಿಯಿಂದ ವಾಷಿಂಗ್ಟನ್ಗೆ ಮರಳಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪರಿಷ್ಕೃತ ಪ್ರಸ್ತಾವವನ್ನು ಪರಿಶೀಲಿಸುತ್ತಿರುವುದಾಗಿ ಇರಾನ್ ಹೇಳಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

‘ಇರಾನ್ನ 14 ಅಂಶಗಳ ಪ್ರಸ್ತಾವದ ಆಧಾರದ ಮೇಲೆ ಮಾತುಕತೆಗಳು ನಡೆಯುತ್ತಿವೆ. ಪಾಕಿಸ್ತಾನದ ಗೃಹ ಸಚಿವರು ಸಂಧಾನಕ್ಕೆ ಸಹಾಯ ಮಾಡಲು ಟೆಹರಾನ್ಗೆ ಬಂದಿದ್ದಾರೆ’ ಎಂದು ಇರಾನ್ನ ವಿದೇಶಾಂಗ ಸಚಿವಾಲಯವು ತಿಳಿಸಿದೆ.

ಯುದ್ಧವನ್ನು ಅಧಿಕೃತವಾಗಿ ಕೊನೆಗೊಳಿಸಲು ಮತ್ತು ಇರಾನ್ನ ಅಣ್ವಸ್ತ್ರ ಕಾರ್ಯಕ್ರಮ, ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತಹ ವಿಷಯಗಳ ಕುರಿತು 30 ದಿನಗಳ ಮಾತುಕತೆ ಪ್ರಾರಂಭಿಸಲು ಅಮೆರಿಕ ಮತ್ತು ಇರಾನ್ ಸಹಿ ಮಾಡುವ ಉದ್ದೇಶದ ಪತ್ರ ಸಿದ್ಧಪಡಿಸಲು ಸಂಧಾನಕಾರರು ಕೆಲಸ ಮಾಡುತ್ತಿದ್ದಾರೆ ಎಂದು ಟ್ರಂಪ್ ಅವರು ನೆತನ್ಯಾಹು ಅವರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.