ಫ್ಲಾರಿಡಾ: ಇರಾನ್ ಜೊತೆಗಿನ ಸಂಘರ್ಷದಿಂದ ಅಮೆರಿಕ ಆದಷ್ಟು ಬೇಗ ಹೊರಬರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.
.ಇಸ್ರೇಲ್–ಲೆಬನಾನ್ ಕದನ ವಿರಾಮ ವಿಸ್ತರಿಸಿ, ಇರಾನ್ಗೆ ಎಚ್ಚರಿಕೆ ನೀಡಿದ ಟ್ರಂಪ್.ಕದನ ವಿರಾಮ: ಇರಾನ್ ಮೇಲೆ ಎರಡು ವಾರ ಬಾಂಬ್ ಹಾಕುವುದಿಲ್ಲ ಎಂದ ಟ್ರಂಪ್.
ಈಗ ಅರ್ಧದಲ್ಲೇ ಹೊರಬಂದು, ಮೂರು ವರ್ಷಗಳ ನಂತರ ಮತ್ತೆ ಅದೇ ಸಮಸ್ಯೆ ಎದುರಿಸುವುದನ್ನು ನಾವು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಕದನ ವಿರಾಮದ ಕಾರಣದಿಂದ ಈಗ ಸ್ಥಗಿತಗೊಂಡಿರುವ ಯುದ್ಧವನ್ನು ಕೊನೆಗಾಣಿಸಲು ಅಮೆರಿಕದ ಜೊತೆಗೆ ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಇರಾನ್ ಮೇಲೆ ಮತ್ತೆ ವಾಯುದಾಳಿ ನಡೆಸುವ ಸಾಧ್ಯತೆಯನ್ನು ಡೊನಾಲ್ಡ್ ಟ್ರಂಪ್ ತಳ್ಳಿ ಹಾಕಿದ್ದಾರೆ.

ಕದನ ವಿರಾಮಕ್ಕೆ ಒಪ್ಪಿಗೆ...

ಇಲ್ಲಿನ ಒವಲ್ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, 'ಏಪ್ರಿಲ್ 8ರಂದು ಕೈಗೊಂಡ ಒಪ್ಪಂದದ ಪ್ರಕಾರ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿವೆ. ಒಂದೊಮ್ಮೆ ಅಮೆರಿಕವು ಯುದ್ಧ ಪುನಾರರಂಭಿಸಿದರೆ, ಮತ್ತೆ ವಾಯುದಾಳಿ ನಡೆಸುವುದಾಗಿ ಇರಾನ್ ಬೆದರಿಕೆ ವೊಡ್ಡಿದೆ. ಆದರೆ, ಈಗ ಅದರ ಅಗತ್ಯವಿಲ್ಲ. ಅವರೇ ಕದನ ವಿರಾಮ ಮುರಿಯಲು ಸಿದ್ದರಿಲ್ಲ' ಎಂದು ಟ್ರಂಪ್ ತಿಳಿಸಿದ್ದಾರೆ.

'ಇರಾನ್ ಮೇಲೆ ನಾವು ನಡೆಸಿದ ಸೇನಾ ಕಾರ್ಯಾಚರಣೆಯ ಬಳಿಕ ಆ ದೇಶದ ಸೇನಾ ಸಾಮರ್ಥ್ಯ ತೀವ್ರವಾಗಿ ಕುಗ್ಗಿದೆ' ಎಂದು ಹೇಳಿದ್ದಾರೆ. 'ಅವರ ನೌಕಾಪಡೆ ನಾಶವಾಗಿದೆ, ವಾಯುಸೇನೆ ನಾಶವಾಗಿದೆ. ಅವರ ಡೋನ್ ಕಾರ್ಖಾನೆಯು ಶೇಕಡ 82ರಷ್ಟು ನಾಶವಾಗಿದೆ. ಅವರ ಕ್ಷಿಪಣಿ ತಯಾರಿಕಾ ಘಟಕಕ್ಕೂ ತೀವ್ರವಾಗಿ ಹಾನಿಯಾಗಿದ್ದು, ಶೇಕಡ 90ರಷ್ಟು ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ' ಎಂದು ಟ್ರಂಪ್ ವಿವರಿಸಿದ್ದಾರೆ.

'ಇರಾನ್ನ ಪರಮಾಣು ಸಾಮರ್ಥ್ಯವನ್ನು ನಾವು ಅಳಿಸಿ ಹಾಕಿದ್ದೇವೆ. ಹೊರ್ಮುಜ್ ಜಲಸಂಧಿಯನ್ನು ನಾವು ತಡೆದಿದ್ದರಿಂದ ಇರಾನ್ ಆರ್ಥಿಕತೆಯೂ ತೀವ್ರವಾಗಿ ಕುಸಿದಿದೆ' ಎಂದು ತಿಳಿಸಿದ್ದಾರೆ.
.ಒಪ್ಪಂದ ಮಾಡಿಕೊಳ್ಳಲು ಇರಾನ್ ಬಯಸುತ್ತಿದೆ: ಡೊನಾಲ್ಡ್ ಟ್ರಂಪ್.ಕದನ ವಿರಾಮ: ‘ತಾತ್ಕಾಲಿಕ’ ಸಮಾಧಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.