ನವದೆಹಲಿ: 'ನಾನು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿಕೆಯ ಮಾತುಗಳನ್ನಾಡಿದಾರೆ.

ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯಲ್ಲಿ ನಡೆದ ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಮಾತನಾಡಿದ ಟ್ರಂಪ್, 'ಭಾರತವು ನಮ್ಮ ಮೇಲೆ ನಂಬಿಕೆಯನ್ನು ಇಡಬಹುದು' ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗವಹಿಸಿದ್ದರು.

'ನಾನು ಭಾರತವನ್ನು ಇಷ್ಟಪಡುತ್ತೇನೆ. ಪ್ರಧಾನಿ ಮೋದಿ ಶ್ರೇಷ್ಠ ವ್ಯಕ್ತಿ, ನನ್ನ ಮಿತ್ರ' ಎಂದು ಪ್ರಶಂಸಿಸಿದ್ದಾರೆ.

'ನಾವು ಭಾರತದೊಂದಿಗೆ ಇಷ್ಟು ಹತ್ತಿರಕ್ಕೆ ಎಂದೂ ಬಂದಿರಲಿಲ್ಲ. ಭಾರತವು ನಮ್ಮ ದೇಶದ ಮೇಲೆ ಶೇ 100ರಷ್ಟು ವಿಶ್ವಾಸವನ್ನು ಇರಿಸಬಹುದಾಗಿದೆ. ಭಾರತವು ಬಯಸಿದ್ದೆಲ್ಲ ಸಿಗುತ್ತದೆ. ನಾನು ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ' ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ಮಾರ್ಕೊ ರುಬಿಯೊ ಅವರನ್ನು ಟ್ರಂಪ್ ಹೊಗಳಿದ್ದು, 'ನಮ್ಮ ದೇಶದ ಇತಿಹಾಸದಲ್ಲೇ ಶ್ರೇಷ್ಠ ವಿದೇಶಾಂಗ ಕಾರ್ಯದರ್ಶಿ' ಎಂದು ಬಣ್ಣಿಸಿದ್ದಾರೆ.
.ಒಪ್ಪಂದಕ್ಕೆ ಸಹಿ ಹಾಕುವವರೆಗೆ ಇರಾನ್ ಮೇಲಿನ ದಿಗ್ಬಂಧನ ಮುಂದುವರಿಯುತ್ತದೆ: ಟ್ರಂಪ್.ಚೀನಾಗೆ ಟ್ರಂಪ್, ಭಾರತಕ್ಕೆ ರೂಬಿಯೊ ಭೇಟಿ: ದೊಡ್ಡಣ್ಣನ ಮಾಸ್ಟರ್ ಪ್ಲಾನ್ ಏನು ? .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.