ವಾಷಿಂಗ್ಟನ್: ಪಶ್ಚಿಮ ಏಷ್ಯಾ ಸಂಘರ್ಷವನ್ನು ಕೊನೆಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧದ ಮಾತುಕತೆಯಲ್ಲಿ ಅಮೆರಿಕ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದ್ದಾರೆ. ಈ ನಡುವೆ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಕೊನೆಗೊಳಿಸಲು ಅಮೆರಿಕವು ಇರಾನ್ ಮುಂದೆ 15 ಅಂಶಗಳ ಪ್ರಸ್ತಾವನೆಯನ್ನು ಇಟ್ಟಿದೆ ಎಂದು ಕೆಲ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ತಮ್ಮ ಪ್ರಸ್ತಾವನೆಯ ಕುರಿತು ಚರ್ಚೆಗಳಿಗೆ ಅವಕಾಶ ನೀಡಲು ಅಮೆರಿಕವು ಒಂದು ತಿಂಗಳ ಅವಧಿಯ ಕದನ ವಿರಾಮಕ್ಕೆ ಒತ್ತಾಯಿಸುತ್ತಿದೆ. ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜೇರೆಡ್ ಕುಶ್ನರ್ ಈ ಯೋಜನೆ ರೂಪಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಸ್ರೇಲ್ನ ಚಾನೆಲ್ 12 ವರದಿ ಮಾಡಿದೆ.

ಪ್ರಸ್ತಾವನೆಯ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಅಮೆರಿಕವು ಇರಾನ್ನೊಂದಿಗೆ ಯೋಜನೆಯನ್ನು ಹಂಚಿಕೊಂಡಿದೆ ಎಂದು ಮೂಲವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಈ ಪ್ರಸ್ತಾವನೆಯನ್ನು ಪಾಕಿಸ್ತಾನದ ಮಧ್ಯವರ್ತಿಗಳ ಮೂಲಕ ಇರಾನ್ಗೆ ತಲುಪಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಇಸ್ರೇಲ್ ಮಾಧ್ಯಮಗಳ ಪ್ರಕಾರ, ಈ ಪ್ರಸ್ತಾವನೆಯಲ್ಲಿ ಇರಾನ್ನ ಪರಮಾಣು ಯೋಜನೆಯನ್ನು ಸ್ಥಗಿತಗೊಳಿಸುವುದು, ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನಿಲ್ಲಿಸುವುದು ಮತ್ತು ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದು ಸೇರಿವೆ.

15 ಅಂಶಗಳ ಪ್ರಸ್ತಾವನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವಾದರೂ, ಇಸ್ರೇಲ್ ಮಾಧ್ಯಮ ಸಂಸ್ಥೆ ಚಾನೆಲ್ 12 ಈ ಕೆಳಗಿನ ಅಂಶಗಳನ್ನು ವರದಿ ಮಾಡಿದೆ.

* ಒಂದು ತಿಂಗಳ ಅವಧಿಯ ಕದನ ವಿರಾಮ.

* ಇರಾನ್ ತಾನು ಅಭಿವೃದ್ಧಿಪಡಿಸಿರುವ ಪರಮಾಣು ಕೇಂದ್ರಗಳನ್ನು ಸ್ಥಗಿತಗೊಳಿಸಬೇಕು.

* ಪರಮಾಣು ಶಸ್ತ್ರಾಸ್ತ್ರಗಳನ್ನು ಎಂದಿಗೂ ಹೊಂದುವುದಿಲ್ಲ ಎಂದು ಇರಾನ್ನಿಂದ ದೃಢ ಬದ್ಧತೆ

* ಇರಾನ್ನ ದೇಶದೊಳಗೆ ಯುರೇನಿಯಂ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

* ಅಭಿವೃದ್ಧಿಪಡಿಸಿರುವ ಎಲ್ಲ ಪರಮಾಣು ಸಂಬಂಧಿತ ವಸ್ತುಗಳನ್ನು ಒಪ್ಪಿದ ನಿಯಮಗಳಡಿಯಲ್ಲಿ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ ವರ್ಗಾಯಿಸಬೇಕು.

* ನಟಾಂಜ್, ಇಸ್ಫಹಾನ್ ಮತ್ತು ಫೋರ್ಡೋ ಪರಮಾಣು ಸೌಲಭ್ಯಗಳನ್ನು ನಾಶಪಡಿಸಬೇಕು.

* ಇರಾನ್ನೊಳಗಿನ ಪ್ರಮಾಣು ಸಂಬಂಧಿತ ಎಲ್ಲ ಮಾಹಿತಿಗೆ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ ಅನಿಯಂತ್ರಿತ ಪ್ರವೇಶವನ್ನು ನೀಡಬೇಕು.

* ಇರಾನ್ ಈ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆಗಳ ಮೂಲಕ ನಡೆಸುತ್ತಿರುವ ಪರೋಕ್ಷ ಯುದ್ಧ ನಿಲ್ಲಿಸಬೇಕು

* ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವುದಕ್ಕೆ ಪೂರ್ಣ ವಿರಾಮ ಹಾಕಬೇಕು.

* ಹೊರ್ಮುಜ್ ಜಲಸಂಧಿಯನ್ನು ಸಂಚಾರಮುಕ್ತಗೊಳಿಸಬೇಕು.

* ಇರಾನ್ನ ಕ್ಷಿಪಣಿ ವ್ಯಾಪ್ತಿ ಮತ್ತು ದಾಸ್ತಾನುಗಳ ಮೇಲೆ ಮಿತಿ

* ಇರಾನ್ನ ಮಿಲಿಟರಿಯನ್ನು ರಕ್ಷಣಾತ್ಮಕ ಉದ್ದೇಶಗಳಿಗೆ ಮಾತ್ರ ಸೀಮಿತಗೊಳಿಸುವುದು.

* ಇರಾನ್ ಮೇಲೆ ವಿಧಿಸಲಾದ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕುವುದು.

* ಬುಶೆರ್ನಲ್ಲಿ ವಿದ್ಯುತ್ ಉತ್ಪಾದನೆಗಾಗಿ ನಾಗರಿಕ ಪರಮಾಣು ಇಂಧನ ಯೋಜನೆಯನ್ನು ಅಭಿವೃದ್ಧಿಪಡಿಸಲು ಬೆಂಬಲ..

* ನಿರ್ಬಂಧಗಳನ್ನು ಸ್ವಯಂಚಾಲಿತವಾಗಿ ಮರು ಹೇರುವ ‘ಸ್ನ್ಯಾಪ್ಬ್ಯಾಕ್: ನಿಬಂಧನೆಯನ್ನು ತೆಗೆದುಹಾಕುವುದು.

ಈ ಮಧ್ಯೆ ಶ್ವೇತಭವನದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಪರಮಾಣು ರಹಿತ ಇಂಧನ ಮತ್ತು ಹೊರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ದೊಡ್ಡ ಉಡುಗೊರೆ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಅವರು ನಿರ್ದಿಷ್ಟ ವಿವರಗಳನ್ನು ಹಂಚಿಕೊಂಡಿಲ್ಲ. ಇದು ಬಹಳ ದೊಡ್ಡ ಉಡುಗೊರೆಯಾಗಿದ್ದು, ಅಪಾರ ಪ್ರಮಾಣದ ಹಣಕ್ಕೆ ಸಮನಾವಾಗಿದೆ. ಇದು ನಾನು ಮಾಡಿದ ಬಹಳ ಒಳ್ಳೆಯ ಕೆಲಸ ಎಂದು ಬೆನ್ನುತಟ್ಟಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.