ವಾಷಿಂಗ್ಟನ್: 'ಇರಾನ್ ಯುದ್ಧದ ವಿಷಯದಲ್ಲಿ ಚೀನಾದ ನೆರವಿನ ಅಗತ್ಯವಿಲ್ಲ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಚೀನಾ ಭೇಟಿಗೂ ಮುನ್ನ ವಾಷಿಂಗ್ಟನ್ನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಟ್ರಂಪ್, 'ನಾವು ಶಾಂತಿಯುತವಾಗಿ ಅಥವಾ ಬೇರೆ ರೀತಿಯಲ್ಲಿ ಜಯಿಸಲಿದ್ದೇವೆ' ಎಂದು ಹೇಳಿದ್ದಾರೆ.

'ಯಾವುದೇ ಕಾರಣಕ್ಕೂ ಇರಾನ್ಗೆ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ' ಎಂದು ಹೇಳಿದ್ದಾರೆ.

ಇರಾನ್ ಯುದ್ಧ ವಿಷಯದಲ್ಲಿ ಚೀನಾದ ಹಸ್ತಕ್ಷೇಪವನ್ನು ನಿರೀಕ್ಷಿಸುತ್ತೀರಾ ಎಂದು ಕೇಳಿದಾಗ, 'ಇಲ್ಲ ಇರಾನ್ ವಿಚಾರದಲ್ಲಿ ನಮಗೆ ಯಾವುದೇ ಸಹಾಯ ಬೇಕಿಲ್ಲ. ನಾವು ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಗೆಲ್ಲುತ್ತೇವೆ. ಶಾಂತಿಯುತವಾಗಿ ಅಥವಾ ಬೇರೆ ರೀತಿಯಲ್ಲಿ. ನೌಕಾಪಡೆ, ವಾಯುಪಡೆ ಯುದ್ಧದಲ್ಲಿ ನಿಯಂತ್ರಣ ಸಾಧಿಸಿವೆ' ಎಂದಿದ್ದಾರೆ.

'ಇರಾನ್ ಮೇಲೆ ವಿಧಿಸಿರುವ ದಿಗ್ಭಂದನವನ್ನು ಶೇ 100ರಷ್ಟು ಪರಿಣಾಮಕಾರಿ' ಎಂದು ಟ್ರಂಪ್ ಹೇಳಿದ್ದಾರೆ.

ಏತನ್ಮಧ್ಯೆ ನ್ಯಾಟೊ ವಿರುದ್ಧ ಟ್ರಂಪ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. 'ನಮಗೆ ಅಗತ್ಯವಿದ್ದಾಗ ನ್ಯಾಟೊ ನೆರವಿಗೆ ಬಂದಿಲ್ಲ. ನಮಗೆ ಅದರ ಅಗತ್ಯವಿಲ್ಲ' ಎಂದು ಪುನರುಚ್ಚಿಸಿದ್ದಾರೆ.
.ಚೀನಾಗೆ ಭೇಟಿ ನೀಡಲಿರುವ ಟ್ರಂಪ್ ಅವರ ಟೆಕ್ ತಂಡದಲ್ಲಿ ಮಸ್ಕ್, ಕುಕ್.'ಮಹಾನ್ ವಿಚಾರಗಳು' ಸಂಭವಿಸಲಿವೆ: ಚೀನಾ ಪ್ರವಾಸದ ಕುರಿತು ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.