ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿನ ಕದನ ವಿರಾಮವು ಜೀವರಕ್ಷಕ ಸ್ಥಿತಿಯಲ್ಲಿದೆ. ಇರಾನ್ನ ನೂತನ ಶಾಂತಿ ಪ್ರಸ್ತಾವನೆಯು ಕಸಕ್ಕಿಂತ ಕಡೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ನ ಶಾಂತಿ ಪ್ರಸ್ತಾವನೆಯನ್ನು ಅಮೆರಿಕ ತಿರಸ್ಕರಿಸಿತ್ತು. ಯಾವುದೇ ರೀತಿಯ ಆಕ್ರಮಣಕಾರಿ ಕೃತ್ಯಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ತನ್ನ ಸೇನೆ ಸಿದ್ಧವಾಗಿದೆ ಎಂದು ಇರಾನ್ ಕೂಡ ಹೇಳಿದೆ.

ಇರಾನ್ನ ಶಾಂತಿ ಪ್ರಸ್ತಾವನೆಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಕದನ ವಿರಾಮವು ಕೊನೆಯ ಹಂತದಲ್ಲಿದ್ದು, ಜೀವರಕ್ಷಕ ಸ್ಥಿತಿಯಲ್ಲಿದೆ. ವೈದ್ಯರು ಬಂದು ‘ಸರ್, ನಿಮ್ಮ ಪ್ರೀತಿಪಾತ್ರರು ಬದುಕುಳಿಯುವ ಸಾಧ್ಯತೆಯು ಕೇವಲ ಶೇ 1ರಷ್ಟಿದೆ’ ಎಂದಿದ್ದಾರೆ ಎಂದು ಕಾಲೆಳೆದಿದ್ದಾರೆ.

ಇದೇ ವೇಳೆ ಇರಾನ್ ವಿರುದ್ಧ ನಾವು ಸಂಪೂರ್ಣ ಗೆಲುವು ಸಾಧಿಸಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್ನ ಪ್ರಸ್ತಾವನೆಯನ್ನು ನಾನು ಓದಿದ್ದು, ನನಗೆ ಅದು ಇಷ್ಟವಾಗಿಲ್ಲ. ಹಾಗಾಗಿ ಅದನ್ನು ತಿರಸ್ಕರಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದರು. ನಮ್ಮ ಪ್ರಸ್ತಾವನೆಯು ನ್ಯಾಯಬದ್ಧ ಮತ್ತು ಉದಾರವಾದುದು ಎಂದು ಇರಾನ್ ಪ್ರತಿಪಾದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.